

ಮೈಸೂರು: ನಗರದ ಹೋಟೆಲ್ ಸದರ್ನ್ ಸ್ಟಾರ್ ಹೋಟೆಲ್‌ನಲ್ಲಿ ರೇಷ್ಮೆ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ ‘ಸಿಲ್ಕ್ ಇಂಡಿಯಾ-2023‘ ಅನ್ನು ಶುಕ್ರವಾರದಿಂದ ಹತ್ತು ದಿನಗಳ ಕಾಲ ಆಯೋಜಿಸಲಾಗಿದೆ.
ಮೇಳಕ್ಕೆ ನಟಿ ಸಾರಿಕಾ ಚಾಲನೆ ನೀಡಿ, ನಾನಾ ರಾಜ್ಯಗಳ ನವೀನ ವಿನ್ಯಾಸದ ರೇಷ್ಮೆ ಸೀರೆಗಳು ಮಾರಾಟ, ಪ್ರದರ್ಶನಗೊಳ್ಳುತ್ತಿವೆ. ಒಂದೇ ಸೂರಿನಡಿ ಬಹು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಮೇಳಕ್ಕೆ ಶುಭ ಕೋರಿದರು.
ತಸ್ಸರ್ ರೇಷ್ಮೆ ಸೀರೆಗಳು, ಕ್ರೇಪ್ ಮತ್ತು ಜಾರ್ಜೆಟ್ ಸಿಲ್ಕ್, ಅರಿಣಿ ರೇಷ್ಮೆ ಸೀರೆಗಳು, ಧರ್ಮಾವರಂ, ಕಾಂಚಿಪುರಂ ಸಿಲ್ಕ್, ರಾ ಸಿಲ್ಕ್ ಮತ್ತು ಕೋಸಾ ಸೀರೆಗಳು, ಕೊಲ್ಕತ್ತಾ ಗಣಪತಿ, ಢಾಕಾ, ಡಿಸೈನರ್ ಎಂಬ್ರಾಯಿಡರಿ ಸೀರೆ ಮತ್ತು ಡ್ರೆಸ್, ಬಲ್‌ಚೂರಿ ರೇಷ್ಮೆ, ಮಟ್ಕಾ ಪಶ್ಮೀನಾ ಸೀರೆಗಳು, ಡಿಸೈನರ್ ಡ್ರೆಸ್ ಮೇಟೀರಿಯಲ್ ಪ್ರದರ್ಶನ ಹಾಗೂ ಮಾರಾಟ ಇರಲಿದೆ. ಪ್ರತಿದಿನ ಬೆಳಗ್ಗೆ 10.30ರಿಂದ ರಾತ್ರಿ 8.30 ರವರೆಗೆ ಅವಕಾಶ ಕಲ್ಪಿಸಲಾಗಿದೆ.