ಸಿಲಿಂಡರ್​ ಸ್ಫೋಟಗೊಂಡು ಗುಡಿಸಲು ಭಸ್ಮ

Published on

ತುಮಕೂರು: ಹೆಬ್ಬೂರು ಸಮೀಪದ ರಾಮನಹಳ್ಳಿಯಲ್ಲಿ ಭಾನುವಾರ ರಾತ್ರಿ ವಿದ್ಯುತ್​ ಶಾರ್ಟ್​ಸಕ್ಯೂರ್ಟ್​ನಿಂದ ಬೆಂಕಿ ತಗುಲಿ ಅಡುಗೆ ಸಿಲಿಂಡರ್​ ಸ್ಫೋಟಗೊಂಡು ಮೂರು ಗುಡಿಸಲು ಸಂಪೂರ್ಣ ಭಸ್ಮವಾಗಿದೆ. ಕೂಲಿಗಾಗಿ ಬಂದಿರುವ ಐದು ಕುಟುಂಬಗಳು ಟೆಂಟ್​ ಹಾಕಿಕೊಂಡು ವಾಸಿಸುತ್ತಿದ್ದರು. ಈ ಕುಟುಂಬದ ಗುಡಿಸಲಿಗೆ ಬೆಂಕಿ ತಲುಗುಲಿದ್ದು, 3 ಗುಡಿಸಲು ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ. ಗುಡಿಸಿನಲ್ಲಿದ್ದ ದಿನಸಿ ವಸ್ತುಗಳು, ಮಕ್ಕಳ ಪಠ್ಯಪುಸ್ತಕಗಳು, ಬಟ್ಟೆ, ದಾಖಲಾತಿ ಸೇರಿ ಎಲ್ಲ ವಸ್ತುಗಳು ಸುಟ್ಟಿವೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net