ಸಿಲಿಂಡರ್ ಸ್ಫೋಟಕ್ಕೆ ಒಂದು ಬಲಿ

22 KLB SEDAM 02
Published on

ಸೇಡಂ: ಮೋಮಿನಪುರ ಬಡಾವಣೆಯಲ್ಲಿ ಶುಕ್ರವಾರ ಸಿಲಿಂಡರ್ ಸ್ಫೋಟಗೊಂಡು ಒಬ್ಬ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ಸ್ಫೋಟಕ್ಕೆ ಮನೆ ಛಿದ್ರವಾಗಿದ್ದು, ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ.
ಬೆಳಗ್ಗೆ ಮನೆಯವರು ಸಿಲಿಂಡರ್ ಹೊತ್ತಿಸುವಾಗ ದಿಢೀರ್ ಸ್ಫೋಟಗೊಂಡಿದ್ದು, ರಾಜು ತಾಯಿತ್ (55) ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾನೆ. ಗಂಭೀರ ಗಾಯಗೊಂಡಿರುವ ಗಂಗಮ್ಮ ತಾಯಿತ್ (70), ಸುಮಾ ತಾಯಿತ್ (40), ಬಸವರಾಜ ತಾಯಿತ್ (22) ಅವರನ್ನು ಕಲಬುರಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಅಪರಾಧ ವಿಭಾಗದ ಪಿಎಸ್ಐ ಅಯ್ಯಪ್ಪ ಭೀಮಾವರಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net