ಸಿಲಿಂಡರ್ ಸ್ಪೋಟದಿಂದ ನಾಲ್ವರಿಗೆ ಗಾಯ

Published on

ಹುಬ್ಬಳ್ಳಿ: ನಗರದ ವೀರಾಪುರ ಓಣಿಯ ಕರಿಯಮ್ಮ ದೇವಸ್ಥಾನದಲ್ಲಿ ಸಿಲಿಂಡರ್ ಸ್ಪೋಟಗೊಂಡು ಅರ್ಚಕ, ಬಾಲಕಿ ಹಾಗೂ ಇಬ್ಬರು ಮಹಿಳೆಯರು ಮಂಗಳವಾರ ಗಾಯಗೊಂಡ ಘಟನೆ ನಡೆದಿದೆ.

ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ದೇವಸ್ಥಾನದಲ್ಲಿ ಸನ್ನಿಧಿ (ಪ್ರತ್ಯೇಕ ಕೊಠಡಿ) ಮಾಡಿಕೊಂಡಿದ್ದರು. ಇಲ್ಲಿಯೇ ಊಟ, ಉಪಾಹಾರ ತಯಾರು ಮಾಡಲು ಸಿಲಿಂಡರ್ ಬಳಕೆ ಮಾಡುತ್ತಿದ್ದರು. ಅರ್ಚಕ ಪ್ರಶಾಂತ ಹಿರೇಮಠ (35) ಅವರು ಅಯ್ಯಪ್ಪ ಸ್ವಾಮಿ ಸನ್ನಿಧಿಯ ಬಾಗಿಲು ತೆಗೆದ ಕೂಡಲೇ ಏಕಾಏಕಿ ಸಿಲಿಂಡರ್ ಸ್ಪೋಟಗೊಂಡಿದೆ. ದೇವಸ್ಥಾನಕ್ಕೆ ಬಂದಿದ್ದ ನಮಿತಾ ಬಿಜವಾಡ (4), ಐಶ್ವರ್ಯ ಬಿಜವಾಡ (22), ಸರಸ್ವತಿ ಯಮನೂರು (35) ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಕಿಮ್ಸ್​ನ ಸುಟ್ಟ ಗಾಯಗಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾತ್ರಿ ವೇಳೆ ಸಿಲಿಂಡರ್ ಸೋರಿಕೆಯಾಗಿ ದೀಪದ ಪ್ರಭಾವದಿಂದ ಸಿಲಿಂಡರ್ ಸ್ಪೋಟಗೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net