ಸಿಲಿಂಡರ್ ಬ್ಲಾಸ್ಟ್ ಗೃಹಿಣಿ ಸಾವು

Crime Logo
Published on

ಕಲಬುರಗಿ: ಮನೆಯಲ್ಲಿನ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟವಾಗಿದ್ದರಿಂದ ಗೃಹಿಣಿ ಮೃತಪಟ್ಟ ಘಟನೆ ತಿಲಕ ನಗರದ ಮನೆಯೊಂದರಲ್ಲಿ ನಡೆದಿದೆ. ಕೆರೆ ಅಂಬಲಗಾ ಗ್ರಾಮದ ಅಶ್ವಿನಿ ಬಿರಾದಾರ ಮೃತ ಮಹಿಳೆ. ರಾತ್ರಿ ಮನೆಯಲ್ಲಿ ಗ್ಯಾಸ್ ಹಚ್ಚುವಾಗಿ ಬ್ಲಾಸ್ಟ್ ಆಗಿ, ಗಂಭೀರವಾಗಿ ಗಾಯಗೊಂಡಿದ್ದ ಅಶ್ವಿನಿ ಅವರನ್ನು ನಗರದ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಗಂಭೀರ ಸ್ಥಿತಿ ಆಗಿದ್ದರಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ಯಾಸ್ ಸೋರಿಕೆ ಶಬ್ಧ ಬರುತ್ತಿತ್ತು. ಆದ್ದರಿಂದ ಸ್ಟೋ ಹಚ್ಚಿದ್ದು, ಆ ವೇಳೆ ಬ್ಲಾಸ್ಟ್ ಆಗಿದೆ ಎಂದು ಗಾಯಾಳು ಅಶ್ವಿನಿ ತಿಳಿಸಿದ್ದಾರೆ. ನಂತರ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ. ಈ ಕುರಿತು ಮೃತಳ ತಂದೆ ನೀಡಿದ ದೂರಿನಂತೆ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net