ಸಿರಿಧಾನ್ಯಕ್ಕೆ ಮನಸೋತ ಖಾದ್ಯಗಳ ಪ್ರಿಯರು...!

bkt-12-4
ನವನಗರದ ಎಪಿಎಂಸಿ ಹತ್ತಿರವಿರುವ ಕೃಷಿ ತರಬೇತಿ ಕೇಂದ್ರದಲ್ಲಿ ಗುರುವಾರ ಜಿಲ್ಲಾಡಳಿತ, ಜಿ.ಪಂ, ಧಾರವಾಡ ಕೃಷಿ ವಿಶ್ವವಿದ್ಯಾಲಯ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ತಂತ್ರಜ್ಞಾನ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪಾಕ ಸ್ಪರ್ಧೆಗೆ ಜಿಲ್ಲಾಽಕಾರಿ ಜಾನಕಿ ಕೆ.ಎಂ ಚಾಲನೆ ನೀಡಿದರು. ಜಿ.ಪಂ ಸಿಇಒ ಶಶಿಧರ ಕುರೇರ, ಎಸ್ಪಿ ಅಮರನಾಥ ರೆಡ್ಡಿ, ಕೃಷಿ ಇಲಾಖೆಯ ಉಪನಿರ್ದೇಶಕ ಬಿ.ಎಸ್.ರೂಢಗಿ, ಜಿ.ಪಂ ಮುಖ್ಯ ಯೋಜನಾಽಕಾರಿ ಪುನಿತ್ ಆರ್. ಇದ್ದರು.
Published on

ಬಾಗಲಕೋಟೆ: ನವಣೆ ಹೋಳಿಗೆ, ಉಂಡೆ, ಸಜ್ಜೆ ಮಾದಲಿ, ರಾಗೆ ಹಾಲುಬಾಯಿ, ರಾಗಿ ಹಲ್ವಾ, ಸಜ್ಜೆ ಸಿಹಿ ಕಡಬು, ಸಾಮೆ ಹಿಟ್ಟಿನ ಹಲ್ವಾ..!!

ಹೀಗೆ ಒಂದು ಕಾಲಕ್ಕೆ ಜವಾರಿ ಹಾಗೂ ಸಿರಿ ಧಾನ್ಯದ ಮಹತ್ವ ಕಾಣುತ್ತಿದ್ದ ಖಾದ್ಯ ಪ್ರಿಯರು ನವನಗರದ ಎಪಿಎಂಸಿ ಹತ್ತಿರವಿರುವ ಕೃಷಿ ತರಬೇತಿ ಕೇಂದ್ರದಲ್ಲಿ ಗುರುವಾರ ಜಿಲ್ಲಾಡಳಿತ, ಜಿ.ಪಂ, ಧಾರವಾಡ ಕೃಷಿ ವಿಶ್ವವಿದ್ಯಾಲಯ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ತಂತ್ರಜ್ಞಾನ ಸಂಸ್ಥೆ ಸಹಯೋಗದಲ್ಲಿ ನಡೆದ ಪಾಕ ಸ್ಪರ್ಧೆಯಲ್ಲಿ ನೋಡಿ ಸಂತಸ ಪಟ್ಟರು.

ನೆವಣಕ್ಕಿ ಹೋಳಿಗೆ, ನವಣೆಯ ಬಾದಾಮಿ ಪುರಿ ಹಾಗೂ ಮರೆತು ಹೋದ ಖಾದ್ಯಗಳಾದ ಅಕ್ಕಿ ಉಂಡೆ, ಕುಂಬಳಕಾಯಿ ಹಲ್ವಾ, ಕಜ್ಜಾಯ, ಹುರುಳಿ ಸಂಗಟಿ, ಹೆಸರು ಬೆಳೆ ಖಾರದ ಹೋಳಿಗೆ, ಅಲಸಂದಿ ಸೆಂಡಿಗೆ, ಗೆಣಸಿನ ಹೋಳಿಗೆ, ಗುಲಕಂದ ರೋಜ, ಬಳವಲಕಾಯಿ ಹಣ್ಣಿನ ರಸ, ಕೊಬ್ಬರಿ ಕಡಬು, ಕುಂಬಳಕಾಯಿ ಗಾರ್ಗಿ, ಬದನೆಕಾಯಿ ರೊಟ್ಟಿ ಸಿಹಿ ತಿಂಡಿ ಸೇರಿದಂತೆ ಇತರೆ ಬಗೆಯ ಖಾದ್ಯಗಳು ಆಕರ್ಷಿಸಿದವು.

ಸಿರಿಧಾನ್ಯದಿಂದ ತಯಾರಿಸಿದ ಖಾರ ಖಾದ್ಯ, ಸಿಹಿ ಖಾದ್ಯ ಹಾಗೂ ಮರೆತು ಹೋದ ೧೦೦ಕ್ಕೂ ಹೆಚ್ಚು ಖಾದ್ಯಗಳನ್ನು ಸ್ಪರ್ಧೆಗಳಲ್ಲಿ ಇಡಲಾಗಿತ್ತು, ಮುಖ್ಯವಾಗಿ ಸಜ್ಜೆರೊಟ್ಟಿ, ಹುಣಸೆ, ರಾಗಿ ಶಂಕರಪಾಳೆ, ತಾಲಿಪಟ್ಟು, ಜೋಳದ, ಸಜ್ಜೆಯ ಚಕ್ಕುಲಿ, ರಾಗಿ ನಮಕಿನ್, ಜೋಳದ ಕಿಚಡಿ, ವಡೆ, ದೋಸೆ, ಕಡಬು, ಇಡ್ಲಿ, ಉಪ್ಪಿಟ್ಟು, ನುಚ್ಚು, ಖಾರದ ವಡೆ ಖಾರದ ಖಾದ್ಯ ಸ್ಪರ್ಧೆ ಬಾಯಿ ಚಪ್ಪರಿಸುವಂತೆ ಮಾಡಿತು.

ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಪ್ರತ್ಯೇಕವಾಗಿ ಮೂರು ವಿಭಾಗದಲ್ಲಿ ಪ್ರತ್ಯೇಕ ಬಹುಮಾನ ನೀಡಲಾಗುತ್ತದೆ. ಆಯ್ಕೆಯಾದವರಿಗೆ ಇದೇ ಡಿ. ೧೪ ರಂದು ನವನಗರದ ಕಲಾಭವನದಲ್ಲಿ ಜರಗುವ ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷ÷್ಮಣ ಕಳ್ಳೆನ್ನವರ ತಿಳಿಸಿದರು.

ಕಾರ್ಯಕ್ರಮಕ್ಕೆ ಡಿಸಿ ಜಾನಕಿ ಕೆ.ಎಂ.ಚಾಲನೆ ನೀಡಿದರು. ಜಿ.ಪಂ ಸಿಇಒ ಶಶಿಧರ ಕುರೇರ, ಎಸ್ಪಿ ಅಮರನಾಥ ರೆಡ್ಡಿ, ಕೃಷಿ ಇಲಾಖೆಯ ಉಪನಿರ್ದೇಶಕ ಬಿ.ಎಸ್.ರೂಢಗಿ, ಜಿ.ಪಂ ಮುಖ್ಯ ಯೋಜನಾಽಕಾರಿ ಪುನಿತ್ ಆರ್, ಮುಖ್ಯ ಲೆಕ್ಕಾಽಕಾರಿ ಸಿದ್ದರಾಮೇಶ್ವರ ಉಕ್ಕಲಿ ಸೇರಿದಂತೆ ಕೃಷಿ ಇಲಾಖೆಯ ತಾಲೂಕಾ ಮಟ್ಟದ ಅಽಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net