ಸಿರಿಧಾನ್ಯ ಅಡುಗೆ, ರಂಗೋಲಿ, ವಚನ ಕಂಠ ಪಾಠ ಸ್ಪರ್ಧೆ

CTD--0004
Published on

ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವ ಪ್ರಯುಕ್ತ ಮುರುಘಾಮಠದ ಆವರಣದಲ್ಲಿ ಬುಧವಾರ ಸಿರಿಧಾನ್ಯಗಳ ಅಡುಗೆ, ರಂಗೋಲಿ ಬಿಡಿಸುವ ಹಾಗೂ ವಚನ ಕಂಠ ಪಾಠ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಗುರುಮಠಕಲ್ ಶ್ರೀ ಗುರು ಶಾಂತವೀರ ಮುರುಘ ರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಸಿದ್ದಬಸವ ಕಬೀರಾನಂದ ಸ್ವಾಮೀಜಿ, ಮುರುಘಾಮಠದ ಆಡಳಿತಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ, ಡಾ. ಹರಣಿ ಮಾತನಾಡಿದರು. ಶಾಂತಾ ಅಶೋಕ್, ಸುನೀತಾ ಮಲ್ಲಿಕಾರ್ಜುನ್, ನಾಗರಾಜ್‌ಬೇದ್ರೆ ಇತರರು ಇದ್ದರು.

ಎಳ್ಳು ಹುಂಡೆಗಳು, ಪ್ರೈಡ್‌ರೈಸ್, ಲಡ್ಡು, ಕಟ್ಲೇಟ್, ನಿಪ್ಪಟ್ಟು, ಪುಲಾವ್, ಮೊಸರು ಬಜ್ಜಿ, ಪಾಯಸ, ಬಿಸಿಬೇಳೆಬಾತ್, ಶ್ರೀಲಡ್ಡು, ಅವಲಕ್ಕಿ ಉಂಡೆ, ಅಂಬಲಿ, ಕೋಸಂಬರಿ, ಕೀಲ್ಸ, ರೊಟ್ಟಿ, ಪಚಡಿ, ಪೂರಿ, ಉಂಡೆ ಕಡುಬು, ಟೀ, ಶಾವಿಗೆ, ಇಡ್ಲಿ, ಉಪ್ಪಿಟ್ಟು, ಶೇಂಗಾಪುಡಿ, ಕುರೆಸಾನಿ ಪುಡಿ, ಪಡ್ಡು, ದೋಸೆ, ಪುಲಕ, ಸೂಪು, ಮಾಲ್ಟ್, ಬುತ್ತಿ, ಬಿಸ್ಕತ್, ಚಕ್ಕುಲಿ, ಮೊಸರನ್ನ, ಮಿಲೆಟ್ ಪಾಯಸ, ಹಾರಕ ಪುಲಾವ್, ಹಪ್ಪಳ, ಬಾದಾಮಿ ಪೌಡರ್ ಇತ್ಯಾದಿಗಳನ್ನು ಸ್ಪರ್ಧಿಗಳು ಸಿರಿಧಾನ್ಯಗಳನ್ನು ಬಳಸಿ ಸಿದ್ಧಪಡಿಸಿದ್ದರು.

ಅಡುಗೆ ಸ್ಪರ್ಧೆ ವಿಜೇತರು: ಶ್ರೀದೇವಿ(ಪ್ರ), ಕಲ್ಯಾಣಿ(ದ್ವಿ), ಗಂಗಮ್ಮ(ತೃ)ಹಾಗೂ ಸವಿತಾ ತಿಪ್ಪೇರುದ್ರಪ್ಪ ಸಮಾಧಾನಕರ ಬಹುಮಾನ. ರಂಗೋಲಿ ಸ್ಪರ್ಧೆ: ಜಿ.ಎಸ್. ಯಶೋಧಾ(ಪ್ರ), ಎಂ. ಗಗನ್‌ರಾಜ್ (ದ್ವಿ), ಕೆ.ಎಂ. ಶ್ರೀರಕ್ಷಾ(ತೃ), ಸಿ.ಜೆ. ಮಂಜುಳಾ ಸಮಾಧಾನಕರ ಬಹುಮಾನ. ಚುಕ್ಕಿರಂಗೋಲಿ ಸ್ಪರ್ಧೆ: ಜ್ಯೋತಿ ಬಸವರಾಜ್(ಪ್ರ), ಪಿ.ತ್ರಿಷಾ(ದ್ವಿ), ಎಸ್. ಕಾವೇರಿ(ತೃ), ಪಿ. ಪುಷ್ಪಾ ಸಮಾಧಾನಕಾರ ಬಹುಮಾನ. ವಚನ ಕಂಠಪಾಠ ಸ್ಪರ್ಧೆ(ವಿದ್ಯಾರ್ಥಿ ವಿಭಾಗ ) ಸಿ.ವೈ. ಸ್ಫೂರ್ತಿ(ಪ್ರ), ಸಿ. ಸಾನ್ವಿ (ದ್ವಿ)ಹಾಗೂ ದೀಪ್ತಿ(ತೃ). (ವಯಸ್ಕರ ವಿಭಾಗ) ಗೀತಾರುದ್ರೇಶ್(ಪ್ರ), ಆರ್. ಲೀಲಾವತಿ (ದ್ವಿ), ಭಾಗ್ಯಲಕ್ಷ್ಮೀ(ತೃ).

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net