

ಸಿರಗುಪ್ಪ: ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸೋಮವಾರ ಜನರು ಓಕಳಿ ಸಂಭ್ರಮದಲ್ಲಿ ಮಿಂದೆದ್ದರು. ಯುಗಾದಿ ಮರು ದಿನ ಬಣ್ಣ ಆಡುವುದು ವಿಶೇಷ. ಜನರು ಸಂಬಂಧಿಕರು, ಸ್ನೇಹಿತರಿಗೆ ಬಣ್ಣ ಹಚ್ಚಿ ಸಂಭ್ರಮಿಸಿದರು. ವಿವಿಧೆಡೆ ಹಲಗೆ ಬಾರಿಸುತ್ತಾ ಹಾಗೂ ಸಿನಿಮಾ ಹಾಡುಗಳಿಗೆ ಜನರು ಕುಣಿದು ಕುಪ್ಪಳಿಸಿದರು.
ಸೋಮವಾರ ಬೆಳಗ್ಗೆಯಿಂದಲೇ ಯುವಕರು, ಯುವತಿಯರು, ಮಕ್ಕಳು ಗುಂಪು, ಗುಂಪಾಗಿ ಸ್ನೇಹಿತರೊಂದಿಗೆ ಗಲ್ಲಿಗಳನ್ನು ಸುತ್ತಾಡುತ್ತಾ ಓಕುಳಿ ಆಡಿದರು. ಕೆಲ ಯುವಕರು ದ್ವಿಚಕ್ರ ಹಾಗೂ ಇತರ ವಾಹನಗಳಲ್ಲಿ ತಿರುಗಾಡುತ್ತಾ ಬಣ್ಣ ಎರಚಿ ಸಂಭ್ರಮಿಸಿದರು. ಓಕಳಿ ನಿಮಿತ್ತ ನಗರದ ಹಲವು ಕಡೆ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿತ್ತು.