ಸಿರಗುಪ್ಪ ತಾಲೂಕಿನಲ್ಲಿ 2 ಮನೆಗಳಿಗೆ ಹಾನಿ

18 SIRAGUPPA 01
Published on

ಸಿರಗುಪ್ಪ: ತಾಲೂಕಿನಾದ್ಯಂತ ಶನಿವಾರ ತಡರಾತ್ರಿ ಭಾರಿ ಮಳೆ ಸುರಿಯಿತು. ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಮಳೆಯಿಂದಾಗಿ ಹಗರಿ ನದಿಗೆ ನೀರು ಹರಿದು ಬರುತ್ತಿದೆ. ರಾರಾವಿ ಗ್ರಾಮದಿಂದ ಕುರುವಳ್ಳಿಗೆ ಸಂಪರ್ಕ ಕಲ್ಪಿಸುವ ಯಲ್ಲಮ್ಮನ ಹಳ್ಳ ಉಕ್ಕಿ ಹರಿಯಿತು. ಎಚ್.ಹೊಸಳ್ಳಿ ಗ್ರಾಮದಿಂದ ತಾಳೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಿರೇಹಳ್ಳದ ಸೇತುವೆ ಮೇಲೆ ನೀರು ಹರಿದು ರಸ್ತೆ ಸಂಪರ್ಕ ಕಡಿತವಾಗಿದೆ. ತಾಳೂರು ಗ್ರಾಮದ ಶಿವಮ್ಮ ಅವರ ಮಣ್ಣಿನ ಮನೆಯ ಛಾವಣಿ ಕುಸಿದಿದೆ.  ರಾರಾವಿ ಗ್ರಾಮದ ಮಾರೆಮ್ಮ ಅವರ ಮನೆ ಭಾಗಶಃ ಹಾನಿಯಾಗಿದೆ ಎಂದು ತಹಸೀಲ್ದಾರ್ ನರಸಪ್ಪ ತಿಳಿಸಿದ್ದಾರೆ.

ಸಿರಗುಪ್ಪದಲ್ಲಿ 26.2 ಮಿಮೀ., ತೆಕ್ಕಲಕೋಟೆ 28.8 ಮಿ.ಮೀ., ಸಿರಿಗೇರಿ 48.3 ಮಿ.ಮೀ. ಎಂ.ಸೂಗುರು 26.8 ಮಿ.ಮೀ., ಹಚ್ಚೊಳ್ಳಿ 28.8 ಮಿ.ಮೀ. ರಾವಿಹಾಳ್ 18.6 ಮಿ.ಮೀ., ಕರೂರು 50.2 ಮಿ.ಮೀ., ಕೆ.ಬೆಳಗಲ್ಲು ಗ್ರಾಮದಲ್ಲಿ 70.4 ಮಿ.ಮೀ. ತಾಲೂಕಿನಲ್ಲಿ ಸರಾಸರಿ 37.2 ಮಿ.ಮೀ. ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net