

ಕಲಬುರಗಿ: ಬೆಂಗಳೂರಿನ ಎಚ್ಪಿಸಿಎಲ್ ನಡೆಸಿದ "ನ್ಯೂ ಜನರೇಷನ್ ಐಡಿಯಾ ಫಿನ್ ಸ್ರ‍್ಧೆ ೨೦೨೪ರಲ್ಲಿ ಸಿಯುಕೆಯ ಇಂಜಿನಿಯರಿಂಗ್ ವಿದ್ಯರ‍್ಥಿಗಳು ದ್ವೀತಿಯ ಬಹುಮಾನ ಪಡೆದಿದ್ದಾರೆ.
ವಿದ್ಯರ‍್ಥಿಗಳಾದ ಸ್ವಾತಿ ಸಹಾನಿ, ಸತ್ಯಂ ಕುಮಾರ್, ರೋಹನ್ ಪಟೇಲ್, ಅಂಕುರ್ ಮಿಶ್ರಾ, ಕೌಶಲ್ ಕುಮಾರ್, ಕರ‍್ತಿಕ್ ರಾಜಾ ಬೆಂಗಳೂರಿನಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕರ‍್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ನಡೆಸಿದ "ನ್ಯೂ ಜನರೇಷನ್ ಐಡಿಯೇ ಫಿನ್ ಸ್ರ‍್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರರ‍್ಶನ ತೋರಿದ್ದಾರೆ.
ದೇಶದ ಐಐಟಿ, ಉನ್ನತ ಸಂಸ್ಥೆಗಳು, ಪ್ರತಿಷ್ಟಿತ ಶಿಣ ಸಂಸ್ಥೆಗಳ ೫೦೦ ಐಡಿಯಾಗಳನ್ನು ಪ್ರಸ್ತುತ ಪಡಿಸಿದ್ದರು. ಐಐಟಿ ದೆಹಲಿ ಪ್ರಥಮ, ಐಐಟಿ ಗುವಾಹಟಿ ತೃತೀಯ ಸ್ಥಾನ ಪಡೆದಿದೆ. ಈ ಪ್ರಶಸ್ತಿಯೂ ೫೦ ಸಾವಿರ ರೂ. ನಗದು ಬಹುಮಾನ ಹೊಂದಿದೆ ಎಂದು ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಉದಯ ಪಾಟೀಲ್ ತಿಳಿಸಿದ್ದಾರೆ.
ವಿದ್ಯರ‍್ಥಿಗಳ ಸಾಧನೆಗೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ, ಇಂಜಿನಿಯರಿಂಗ್ ನಿಕಾಯದ ಡೀನ್ ಪ್ರೊ.ಪರಮೇಶ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಅಮರೇಂದ್ರ ಪ್ರಶಂಶಿಸಿದ್ದಾರೆ.