ಸಿಮೆಂಟ್ ಮಿಕ್ಸಿಂಗ್ ಕ್ರಶರ್ ಸ್ಥಳಾಂತರಿಸಿ

14 MANJU 03
Published on

ಹೊಸಪೇಟೆ: ಪಾಪಿನಾಯಕನಹಳ್ಳಿ ಬಳಿ ಸಿಮೆಂಟ್ ಮಿಕ್ಸಿಂಗ್ ಕ್ರಶರ್ ಪ್ಲಾಂಟ್ ಸ್ಥಳಾಂತರಿಸಬೇಕು ಎಂದು ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ತಾಲೂಕು ಕಾರ್ಯಾಧ್ಯಕ್ಷ ಕೆ.ಎಚ್.ಮಹಾಂತೇಶ್ ಆಗ್ರಹಿಸಿದ್ದಾರೆ.

ಈ ಭಾಗದಲ್ಲಿ ಜೋಳ, ತೊಗರಿ, ಮೆಕ್ಕೆಜೋಳ ಸೇರಿದಂತೆ ಇನ್ನಿತರೆ ಬೆಳೆಗಳು ಬೆಳೆದಿದ್ದಾರೆ. ಸಿಮೆಂಟ್ ಮಿಕ್ಸಿಂಗ್ ಕ್ರಶರ್‌ನಿಂದ ನಾವು ಬೆಳೆದ ಬೆಳೆಗಳಿಗೆ ಇಳುವರಿ ಕುಂಟಿತವಾಗಿದೆ. ಬೆಳೆಗಳ ಮೇಲೆ ದೂಳು ಮತ್ತು ರಾಸಾಯನಿಕ ಮಿಶ್ರಣದ ವಿಷ ಪದಾರ್ಥನ ಅನೀಲ ಸೇರ್ಪಡೆಯಾಗುತ್ತದೆ. ಸುತ್ತಮುತ್ತಲಿನ ಬೆಳೆಗಳು ನಾಶವಾಗಿದೆ. ಹೊಲಗಳಿಗೆ ಹೋದರೆ ದೂಳಿನಿಂದ ಕೆಮ್ಮು, ಹಸ್ತಮ, ತೆಲೆಸುತ್ತುವಿಕೆ, ಉಸಿರಾಟದ ತೊಂದರೆ ಮತ್ತು ಇನ್ನಿತರೆ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ನಮ್ಮ ಹೊಲಗಳಿಗೆ ಕೆಲಸ ಮಾಡಲು ಬೇರೆ ರೈತರು, ಕೂಲಿ ಕಾರ್ಮಿಕರು ಕೂಡ ಬರುತ್ತಿಲ್ಲ. ಇದರಿಂದ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮಕೈಗೊಂಡಿಲ್ಲ. ಆದ್ದರಿಂದ ರೈತರಿಗೆ ಮಾರಕವಾದ ಈ ಕ್ರಶರ್‌ನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕು. ಹಾಗೂ ಸ್ಥಳಾಂತರ ಜಾಗದಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net