ಸಿಬ್ಬಂದಿ ರಚನಾತ್ಮಕ ಸಲಹೆ ನೀಡಲಿ

4CHIKODIGRAMEEN1
ಯಕ್ಸಂಬಾ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಸಿಬ್ಬಂದಿ ಸಭೆ ಉದ್ದೇಶಿಸಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿದರು. ಶಾಸಕಿ ಶಶಿಕಲಾ ಜೊಲ್ಲೆ, ಚಂದ್ರಕಾಂತ ಕೋಠಿವಾಲೆ, ಎಂ.ಪಿ.ಪಾಟೀಲ ಇತರರಿದ್ದರು.
Published on

ಚಿಕ್ಕೋಡಿ ಗ್ರಾಮೀಣ: ನಿಪ್ಪಾಣಿಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರತಿದಿನ 8500 ಟನ್​ ಕಬ್ಬು ನುರಿಸುವ ಕಾರ್ಯಮತೆ ಮತ್ತು 150 ಸಾವಿರ.ಲೀ ಇಥೆನಾಲ್​ ಉತ್ಪಾದಿಸುವ ಟಕವಿದೆ. ಕಾರ್ಖಾನೆ ಹಾಗೂ ರೈತರ ಅಭಿವೃದ್ಧಿಗಾಗಿ ಎಲ್ಲರೂ ಕೈಜೋಡಿಸಬೇಕೆಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಬೀರೇಶ್ವರ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಿಪ್ಪಾಣಿ ಹಾಲಸಿದ್ದನಾಥ ಕಾರ್ಖಾನೆ ನಿಯಮಿತ (ಮಲ್ಟಿ &ಸ್ಟೇಟ್​) ಸಿಬ್ಬಂದಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಕಾರ್ಖಾನೆ ಏಳಿಗೆಗಾಗಿ ಸಿಬ್ಬಂದಿ ರಚನಾತ್ಮಕವಾಗಿ ಸ್ಪಂದಿಸಿ, ಶ್ರಮಿಸಿದ್ದರಿಂದ ಕಾರ್ಖಾನೆ ಪ್ರಗತಿ ಆಗುತ್ತಿದೆ. ಎಲ್ಲರೂ ಕೂಡಿ ಸಕಾರಾತ್ಮಕವಾಗಿ ಶ್ರಮಿಸೋಣ ಎಂದರು.

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಸಕ್ಕರೆ ಕಾರ್ಖಾನೆ ಮುಚ್ಚುವ ಸಂದರ್ಭದಲ್ಲಿದ್ದಾಗ ಸಂಸದ ಅಣ್ಣಾಸಾಹೇಬ ಜೊಲ್ಲೆ ನೇತೃತ್ವ ವಹಿಸಿ ಕಾರ್ಖಾನೆ ಅಭಿವೃದ್ಧಿಗೊಳಿಸಿದ್ದಾರೆ. ಈ ಕಾರ್ಯದಲ್ಲಿ ಎಲ್ಲ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ, ಸದಸ್ಯರು, ರೈತರು ಕೈಜೋಡಿಸಿದ್ದಾರೆ ಎಂದರು. ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಅಧ್ಯ ಚಂದ್ರಕಾಂತ ಕೋಠಿವಾಲೆ, ಉಪಾಧ್ಯ ಎಂ.ಪಿ.ಪಾಟೀಲ,ನಿರ್ದೇಶಕ ಮಂಡಳಿ ಸದಸ್ಯರು, ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net