ಸಿಬ್ಬಂದಿ ನೇಮಕಕ್ಕೆ ಆಗ್ರಹಿಸಿ ಕೆನರಾ ಬ್ಯಾಂಕ್ ನೌಕರರ ಮತ ಪ್ರದರ್ಶನ

dvg-mata-pradarshana-nov-15.jpg
Published on

ದಾವಣಗೆರೆ: ಉತ್ತಮ ಸೇವೆಗಾಗಿ ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕು ಮತ್ತು ಕಾಯಂ ಹುದ್ದೆಗಳ ಹೊರಗುತ್ತಿಗೆ ನೀಡುವುದನ್ನು ನಿಲ್ಲಿಸಬೇಕು ಮುಂತಾದ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೆನರಾಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ಸದಸ್ಯರು, ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಸದಸ್ಯರು ಬುಧವಾರ, ಸಿದ್ದವೀರಪ್ಪ ಬಡಾವಣೆಯ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಬಳಿ ಮತಪ್ರದರ್ಶನ ನಡೆಸಿದರು.

ನೌಕರ ಸಂಘದ ಮುಖಂಡರಾದ ಕೆ.ವಿಶ್ವನಾಥ ಬಿಲ್ಲವ, ಸಿ.ಪರಶುರಾಮ, ಆರ್.ಆಂಜನೇಯ, ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಬಿ.ಆನಂದಮೂರ್ತಿ, ಕಾರ್ಯದರ್ಶಿ ಎಚ್.ಎಸ್.ತಿಪ್ಪೇಸ್ವಾಮಿ, ಎಂ.ಸತೀಶ್, ಕೆ.ಶಶಿಶೇಖರ್, ಡಿ.ಎ.ಸಾಕಮ್ಮ, ಕೆ.ರವಿಶಂಕರ್, ಅಜಯಕುಮಾರ್, ಅಣ್ಣಪ್ಪ ನಂದಾ, ಶ್ರೀನಿವಾಸ ನಾಡಿಗ್, ಎಂ.ಸಂದೀಪ್, ಶ್ವೇತಾ, ಸುಮಂತ್, ಪ್ರಶಾಂತ್, ಜ್ಞಾನೇಶ್ವರ ಮಾಲವಾಡೆ ಮುಂತಾದವರು ಭಾಗವಹಿಸಿದ್ದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net