ಸಿಬ್ಬಂದಿ ಆರೋಗ್ಯದತ್ತ ಹೆಚ್ಚಿನ ಕಾಳಜಿ

NEKSRTC
Published on

ಕಲಬುರಗಿ: ಸಾರಿಗೆ ಸಂಸ್ಥೆಯ ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದಾಗಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗಿದ್ದು, ಸದುಪಯೋಗ ಪಡೆದುಕೊಳ್ಳಿ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಹೇಳಿದರು.
ಕೆಕೆಆರ್‌ಟಿಸಿ ಡಿಪೋ ೧ರಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿ, ಘಟಕದಲ್ಲಿ ಸುಮಾರು ೫೦೦ಕ್ಕೂ ಅಧಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ತಂಪಾದ ಹಾಗೂ ಶುದ್ಧ ನೀರು ಸಿಗಲಿ ಎಂಬ ಉz್ದೆÃಶದಿಂದ ವಾಟರ್ ಪ್ಲಾಂಟ್ ಅಳವಡಿಸಲಾಗಿದೆ. ನೀರು ಅಮೃತಕ್ಕೆ ಸಮಾನ. ಹಿತ ಹಾಗೂ ಮಿತವಾಗಿ ಬಳಕೆ ಮಾಡಬೇಕು ಎಂದು ಕರೆ ನೀಡಿದರು.
ಸಿಬ್ಬಂದಿ ಆರೋಗ್ಯದ ಕಡೆ ಕಾಳಜಿ ವಹಿಸಬೇಕು. ನಿತ್ಯ ವ್ಯಾಯಾಮ ಹಾಗೂ ಯೋಗ ಮಾಡಬೇಕು. ನಿಮ್ಮೆಲ್ಲರ ಕಠಿಣ ಶ್ರಮದಿಂದಲೇ ನಮ್ಮ ಸಂಸ್ಥೆ ಮಾದರಿಯಾಗಿ ಬೆಳೆಯುತ್ತಿದೆ. ಅಲ್ಲದೆ ಅತ್ಯಧಿಕ ಆದಾಯವೂ ಬರುತ್ತಿದೆ. ಎಲ್ಲ ಸಿಬ್ಬಂದಿಗೂ ಸಕಾಲಕ್ಕೆ ಸಂಬಳ ಹಾಗೂ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇನ್ನು ಕಾರ್ಮಿಕ ಉಪಯೋಗಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
ಉಸ್ತುವಾರಿ ಅಧಿಕಾರಿ ಶ್ರೀದೇವಿ, ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಸಿದ್ದಪ್ಪ ಗಂಗಾಧರ್, ವಿಭಾಗ ಘಟಕ ವ್ಯವಸ್ಥಾಪಕರು, ಅಧಿಕಾರಿಗಳು ಮತ್ತು ಕಾರ್ಮಿಕ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net