ಸಿಬಿಐ ದಾಳಿ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

8kdl1
Published on

ಕುಂದಗೋಳ: ಡಿ.ಕೆ. ಶಿವಕುಮಾರ ಮನೆ ಮೇಲೆ ನಡೆದ ಸಿಬಿಐ ದಾಳಿ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಬಸವರಾಜ ಮೆಳವಂಕಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು. ಗಾಳಿ ಮರಿಯಮ್ಮ ದೇವಸ್ಥಾನದಿಂದ ತಹಸೀಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿದರು. ಜಿಪಂ ಸದಸ್ಯ ಉಮೇಶ ಹೆಬಸೂರು, ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಸುರೇಶ ಗಂಗಾಯಿ, ವೆಂಕನಗೌಡ ಹಿರೇಗೌಡ, ದೃತಿ ಸಾಲ್ಮನಿ, ಬಸವರಾಜ ತಳವಾರ, ಅಪ್ಪಣ್ಣ ಹಿರೇಗೌಡರ, ಸಕ್ರು ಲಮಾಣಿ, ಮಹ್ಮದ್ ಮತ್ತಿಖಾನವರ, ಹನುಮಂತ ಆನೆ, ಹರೀಶ ಲಕ್ಷ್ಮೇಶ್ವರ, ಅಡಿವೆಪ್ಪ ಭಂಡಿವಾಡ, ಗಂಗಮ್ಮ ಭಂಡಿವಾಡ, ನಿಂಗಪ್ಪ ಹಳ್ಳಿಕೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net