ಸಿಬಿಐ ಅಧಿಕಾರಿಗಳಿಂದ ವಿಜಯ ಕುಲಕರ್ಣಿ ವಿಚಾರಣೆ

26 Dwd 2
Published on

ಧಾರವಾಡ: ಹೆಬ್ಬಳ್ಳಿ ಕ್ಷೇತ್ರದ ಜಿ.ಪಂ. ಸದಸ್ಯನಾಗಿದ್ದ ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ಶುಕ್ರವಾರವೂ ಹಲವರನ್ನು ಕರೆಸಿ ವಿಚಾರಣೆ ನಡೆಸಿದರು.

ಕೆಲ ದಿನಗಳಿಂದ ನಗರದಲ್ಲೇ ಬೀಡು ಬಿಟ್ಟಿರುವ ಅಧಿಕಾರಿಗಳು ಬೆಳಗ್ಗೆ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿಯನ್ನು ಉಪನಗರ ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು.

ಸಂಜೆ 6 ಗಂಟೆ ಸುಮಾರಿಗೆ ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ ಹಾಗೂ ಕಾಂಗ್ರೆಸ್ ಮುಖಂಡ ವಿಜಯ ಕುಲಕರ್ಣಿಯನ್ನು ಠಾಣೆಗೆ ಕರೆಸಿ ವಿಚಾರಣೆಗೊಳಪಡಿಸಲಾಯಿತು. ಸಿಬಿಐ

ತಂಡ ಕೆಲ ದಿನಗಳ ಹಿಂದೆ ವಿಜಯ ಕುಲಕರ್ಣಿಗೆ ನೋಟಿಸ್ ನೀಡಿ ಬೆಂಗಳೂರಿನಲ್ಲಿ ವಿಚಾರಣೆಗೊಳಪಡಿಸಿತ್ತು.ಅವರನ್ನು 2ನೇ ಬಾರಿ ಉಪನಗರ ಠಾಣೆಗೆ ಕರೆಸಿ ಸುಮಾರು 40 ನಿಮಿಷ ವಿಚಾರಣೆಗೊಳಪಡಿಸಿದರು. ತಮ್ಮ ಜನ್ಮದಿನದಂದೇ ವಿಜಯ ಸಿಬಿಐ ಎದುರು ವಿಚಾರಣೆಗೆ ಹಾಜರಾದರು. ಇದಕ್ಕೂ ಮೊದಲು ಶಿಗ್ಗಾಂವಿಯ ಕಾಂಗ್ರೆಸ್ ಮುಖಂಡ ಹಾಗೂ ಮಹಿಳೆಯೊಬ್ಬಳನ್ನು ಕರೆಸಿದ್ದ ಸಿಬಿಐ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಕಲೆ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net