ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ನಿವೃತ್ತ ಅಧಿಕಾರಿಗೆ 61 ಲಕ್ಷ ರೂ. ವಂಚನೆ

Cyber __Criminals
Published on

ಮೈಸೂರು: ಸಿಬಿಐ ಅಧಿಕಾರಿಗಳು ಎಂದು ಕರೆ ಮಾಡಿದ ವಂಚಕರು, ನಿವೃತ್ತ ಅಧಿಕಾರಿಯೊಬ್ಬರಿಂದ 61 ಲಕ್ಷ ರೂ. ದೋಚಿದ್ದಾರೆ.

ಜಯಲಕ್ಷ್ಮೀಪುರಂ ನಿವಾಸಿ ಹಾಗೂ 86 ವರ್ಷದ ನಿವೃತ್ತ ಅಧಿಕಾರಿಗೆ ನಾವು ಸಿಬಿಐ ಅಧಿಕಾರಿಗಳು ಎಂದು ಪರಿಚಯ ಮಾಡಿಕೊಂಡಿದ್ದಾರೆ.

ನಿಮ್ಮ ಮೊಬೈಲ್ ಸಂಖ್ಯೆ ಮೂಲಕ ಅಕ್ರಮ ಚಟುವಟಿಕೆಗಳು ನಡೆದಿವೆ ಎಂದು ಅವರಲ್ಲಿ ಭೀತಿ ಹುಟ್ಟಿಸಿದ್ದಾರೆ.

ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ನಾವು ಹೇಳಿದ ಖಾತೆಗೆ ವರ್ಗಾಯಿಸಿ. ನಂತರ ಹಣವನ್ನು ನಿಮ್ಮ ಖಾತೆಗೆ ವಾಪಸ್ ಹಾಕಲಾಗುವುದು ಎಂದು ಹೇಳಿದ್ದಾರೆ.

ಹೀಗಾಗಿ, ಅವರು ತಮ್ಮ ಖಾತೆಯಲ್ಲಿದ್ದ 61 ಲಕ್ಷ ರೂ. ಹಣವನ್ನು ಆರೋಪಿಗಳಿಗೆ ಹೇಳಿದ ಖಾತೆಗೆ ಹಾಕಿ ವಂಚನೆಗೆ ಒಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net