

ಕಲಬುರಗಿ: ಶರಣಬಸವೇಶ್ವರ ಪಬ್ಲಿಕ್ ವಸತಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿe್ಞÁನ ವಿಭಾಗದಲ್ಲಿ ಪ್ರವೇಶ ಪಡೆಯುವ ಸಿಬಿಎಸ್‌ಇ ಮತ್ತು ಐಸಿಎಸ್‌ಇ ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆ ಭಾನುವಾರ ನಡೆಯಿತು. ೨೦೦೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ವಿಜಯಪುರ, ಬಳ್ಳಾರಿ, ವಿಜಯನಗರ ಜತೆಗೆ ಮಹಾರಾಷ್ಟç ಮತ್ತು ತೆಲಂಗಾಣದ ವಿವಿಧ ಜಿ¯್ಲೆಗಳ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. ಬಿಸಿಲಿನ ತಾಪ ಹೆಚ್ಚಿರುವುದರಿಂದ ಕ್ಯಾಂಪಸ್‌ನ ಅಲ್ಲಲ್ಲಿ ವಿದ್ಯಾರ್ಥಿ, ಪಾಲಕರಿಗೆ ಕುಡಿಯುವ ನೀರು ಹಾಗೂ ನೆರಳಿಗಾಗಿ ಪೆಂಡಾಲ್ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಸಹಾಯವಾಣಿ ಕೇಂದ್ರ ಆರಂಭಿಸಲಾಗಿತ್ತು.
೧೦೦ ಪ್ರೆಶ್ನೆಗಳ ಪತ್ರಿಕೆ ಇದಾಗಿದ್ದು, ಒಟ್ಟು ೪೦೦ ಅಂಕಗಳು ಇರಲಿವೆ. ತಪ್ಪು ಉತ್ತರಕ್ಕೆ ಅಂಕಗಳು ಮೈನಸ್ ಆಗಲಿವೆ. ಮಧ್ಯಾಹ್ನ ೧ರಿಂದ ೩ರವರೆಗೆ ಪರೀಕ್ಷೆ ನಡೆಯಿತು. ೭ರಂದು ಸಂಜೆ ೪ಕ್ಕೆ ಫಲಿತಾಂಶ ಪ್ರಕಟವಾಗಲಿದ್ದು, ೧೦ರಂದು ಆಯ್ಕೆಪಟ್ಟಿ ನೋಟಿಸ್ ಬೋರ್ಡ್ಗೆ ಲತ್ತಿಸಲಾಗುವುದು ಎಂದು ಡಾ.ಶ್ರೀಶೈಲ್ ಹೊಗಾಡೆ ತಿಳಿಸಿದರು.
೨೩ರಂದು ಪ್ರವೇಶ ಪರೀಕ್ಷೆ: ರಾಜ್ಯ ಪಠ್ಯಕ್ರಮದಲ್ಲಿ ೧೦ನೇ ತರಗತಿ ಬರೆದ ವಿದ್ಯಾರ್ಥಿಗಳಿಗಾಗಿ ಎಸ್‌ಬಿಆರ್‌ನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ೨೩ ರಂದು ಪ್ರವೇಶ ಪರೀಕ್ಷೆ ಆಯೋಜಿಸಲಾಗಿದೆ. ಅಂದಿನ ಪರೀಕ್ಷೆಯಲ್ಲಿ ಸುಮಾರು ನಾಲ್ಕು ಸಾವಿರಕ್ಕಿಂತ ಅಧಿಕ ವಿದ್ಯಾರ್ಥಿಗಳು ಹಾಜರಾಗಲಿz್ದÁರೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯP್ಷÀ ಡಾ.ಶರಣಬಸವಪ್ಪ ಅಪ್ಪ, ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಹಾಗೂ ಕಾರ್ಯದರ್ಶಿ ಬಸವರಾಜ ದೇಶಮುಖ ಮಾರ್ಗದರ್ಶನದಲ್ಲಿ ಎಸ್‌ಬಿಆರ್ ಕಾಲೇಜು ಗುಣಮಟ್ಟದ ಶಿP್ಷÀಣ ನೀಡುವಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಖ್ಯಾತಿ ಪಡೆದಿದೆ. ಹೀಗಾಗಿ ಈ ಕಾಲೇಜಿನಲ್ಲಿ ಪ್ರವೇಶ ಪಡೆಯಲು ರಾಜ್ಯದ ವಿವಿಧ ಜಿ¯್ಲÉಯಗಳಿಂದಲೂ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ ಎಂದು ಪ್ರಾಚಾರ್ಯ ಎನ್.ಎಸ್.ದೇವರಕಲ್ ಮಾಹಿತಿ ನೀಡಿದರು.