ಸಿದ್ಧೇಶ್ವರ ಸ್ವಾಮೀಜಿ ಆದರ್ಶ ಪಾಲಿಸೋಣ

03Kush03
ಕುಶಾಲನಗರ ವೀರಶೈವ ಸಮಾಜ ಹಮ್ಮಿಕೊಂಡಿದ್ದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಶ್ರದ್ಧಾಂಜಲಿ ಸಭೆಯಲ್ಲಿ ಎಚ್.ವಿ. ಶಿವಪ್ಪ, ಸಾಂಬಶಿವಮೂರ್ತಿ, ಮಹದೇವ, ನಟರಾಜ್, ಕಮಲಮ್ಮ, ಲೇಖನಾ, ಮನು ಇತರರು ಹಾಜರಿದ್ದರು.
Published on

ಕುಶಾಲನಗರ: ಲಿಂಗೈಕ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗೆ ಕುಶಾಲನಗರದ ವೀರಶೈವ ಸಮಾಜದ ವತಿಯಿಂದ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಎಚ್.ವಿ. ಶಿವಪ್ಪ ಮಾತನಾಡಿ, ಸ್ವಾಮೀಜಿ ನಮ್ಮನ್ನು ಅಗಲಿದ್ದಾರೆ ಎನ್ನುವುದು ಸೂಕ್ತವಲ್ಲ. ಅವರ ಅಪಾರ ಜ್ಞಾನ, ತತ್ವ ಆದರ್ಶಗಳನ್ನು ಇಲ್ಲಿ ಬಿಟ್ಟು ಹೋಗಿದ್ದಾರೆ. ಅವರ ಆದರ್ಶಗಳನ್ನು ನಾವು ಪಾಲನೆ ಮಾಡುವ ಮೂಲಕ ಗೌರವ ಸೂಚಿಸಬೇಕು ಎಂದರು.

ಅವರ ಪ್ರವಚನ, ಸ್ಫೂರ್ತಿದಾಯಕ ಭಾಷಣಗಳು ಮಾತ್ರ ಸದಾ ಕಾಲ ನಮ್ಮೊಂದಿಗೆ ಇರುತ್ತವೆ. ನುಡಿದಂತೆ ನಡೆದ ಮಹಾನ್ ಚೇತನ ಅವರು ಎಂದು ಶ್ಲಾಘಿಸಿದರು.

ಸ್ವಾಮೀಜಿಯ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಅಕ್ಕನ ಬಳಗದ ಅಧ್ಯಕ್ಷೆ ಕಮಲಮ್ಮ, ಕದಳಿ ವೇದಿಕೆ ಅಧ್ಯಕ್ಷೆ ಲೇಖನಾ, ಕಾರ್ಯದರ್ಶಿ ಮನು, ವೀರಶೈವ ಸಮಾಜದ ಜಿಲ್ಲಾ ಕಾರ್ಯದರ್ಶಿ ಸಾಂಬಶಿವಮೂರ್ತಿ, ತಾಲೂಕು ಉಪಾಧ್ಯಕ್ಷ ಮಂಜುನಾಥ, ಮುಖಂಡರಾದ ನಾಗರಾಜ್, ನಟರಾಜ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net