ಸಿದ್ಧೇಶ್ವರ ಶ್ರೀಗಳು ನುಡಿದಂತೆ ನಡೆದ ಶ್ರೇಷ್ಠ ಸಂತ

Indi, Siddheshwar Sri, Nudinamana, Prajapita Brahmakumari,
ಇಂಡಿ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ವಿವಿಯ ಜ್ಞಾನ ಗಂಗಾ ಭವನದಲ್ಲಿ ಸಿದ್ಧೇಶ್ವರ ಶ್ರೀಗಳಿಗೆ ನುಡಿನಮನ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಎ.ಎಸ್. ಗಾಣಿಗೇರ ಮಾತನಾಡಿದರು. ಡಾ.ಸ್ವರೂಪಾನಂದ ಸ್ವಾಮೀಜಿ, ಬಿ.ಕೆ. ಯಮುನಾ ಅಕ್ಕಾ, ಬಿ.ಕೆ. ಶ್ರೀದೇವಿ ಅಕ್ಕನವರು ಇದ್ದರು.
Published on

ಇಂಡಿ: ವರ್ಷದ ಹಿಂದೆ ಸಿದ್ಧೇಶ್ವರ ಶ್ರೀಗಳು ಇಹಲೋಕ ತ್ಯಜಿಸಿದಾಗ ಕೋಟಿ ಕೋಟಿ ಜನರಿಗೆ ಬರ ಸಿಡಿಲು ಆವರಿಸಿತ್ತು. ಸಿದ್ಧೇಶ್ವರ ಶ್ರೀಗಳ ಪ್ರವಚನಕ್ಕೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರದಲ್ಲೂ ಅಪಾರ ಜನ ಸೇರುತ್ತಿದ್ದರು. ಅವರೊಬ್ಬ ಶತಮಾನ ಕಂಡ ಶ್ರೇಷ್ಠ ಸಂತರು ಎಂದು ನಿವೃತ್ತ ಪ್ರಾಚಾರ್ಯ ಎ.ಎಸ್. ಗಾಣಿಗೇರ ಹೇಳಿದರು.

ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ವಿವಿಯ ಜ್ಞಾನ ಗಂಗಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿದ್ಧೇಶ್ವರ ಶ್ರೀಗಳಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಟ್ಟಣದ ಓಂಕಾರ ಆಶ್ರಮದ ಡಾ.ಸ್ವರೂಪಾನಂದ ಸ್ವಾಮೀಜಿ, ಬ್ರಹ್ಮಕುಮಾರಿ ವಿವಿಯ ಬಿ.ಕೆ. ಯಮುನಾ ಅಕ್ಕಾ, ಬಿ.ಕೆ. ಶ್ರೀದೇವಿ ಅಕ್ಕನವರು, ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ನಿವೃತ್ತ ಪ್ರಾಚಾರ್ಯ ಐ.ಬಿ. ಸುರಪುರ, ಯೋಗ ಶಿಕ್ಷಕ ಬಿ.ಎಸ್. ಪಾಟೀಲ ಮಾತನಾಡಿ, ಸಮಾಜದ ಒಳಿತಿಗೆ ಜ್ಞಾನವನ್ನು ಬಿತ್ತಿದ ಸಿದ್ಧೇಶ್ವರ ಸ್ವಾಮೀಜಿ ಅವರು ನಾಡಿನ ಜನರ ಹೃದಯ ಮಂದಿರದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರು ನುಡಿದಂತೆ ನಡೆದ ಶ್ರೇಷ್ಠ ಸಂತರು ಎಂದರು.

ನಿವೃತ್ತ ತಹಸೀಲ್ದಾರ್ ಶಿವಲಿಂಗಪ್ಪ ಪಟ್ಟದಕಲ್ಲ, ರಾಜಶ್ರೀ ಕೋಳೆಕರ, ಅರವಿಂದ ಕಠಾರೆ, ಉಮಾ ಪಟ್ಟದಕಲ್ಲ, ನಾಗಮ್ಮ ಸಂಗಾ, ದ್ರಾಕ್ಷಾಯಿಣಿ ಮೈದರಗಿ, ವಿದ್ಯಾಶ್ರೀ ಪಾಟೀಲ, ಶ್ಯಾಮಲಾ ಬಗಲಿ, ಭಾರತಿ ಮಾಳಾಬಾಗಿ, ಜ್ಯೋತಿ ವಂದಾಲ, ಪವಿತ್ರ ವಾಲಿ, ಸುಮಾ ಪತಂಗಿ, ಜಯಶ್ರೀ ಪತ್ತಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net