ಸಿದ್ಧೇಶ್ವರ ಶ್ರೀಗಳು ನಡೆದಾಡುವ ದೇವರು: ಪ್ರೊ. ಪಾಟೀಲ ಅಭಿಮತ

28KAGWAD1
ಕಾಗವಾಡ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಿದ್ಧೇಶ್ವರ ಶ್ರೀಗಳ ಗುರು ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪ್ರೊ.ಬಿ.ಎ. ಪಾಟೀಲ, ವಿ.ಎಸ್​. ತುಗಶೆಟ್ಟಿ , ಎಸ್​.ಪಿ. ತಳವಾರ, ಪ್ರೊ.ಸೋನಾಲಿ ಪಡತರೆ ಇತರರಿದ್ದರು.
Published on

ಕಾಗವಾಡ: ವಿಜಯಪುರದ ಸಿದ್ಧೇಶ್ವರ ಶ್ರೀಗಳು ಜೀವಂತ ದೇವರಿಗೆ ಹೋಲಿಸಬಹುದಾದ ವ್ಯಕ್ತಿತ್ವ ಹೊಂದಿದ್ದರು. ಅಂತೆಯೇ ಅವರನ್ನು ಸಾಮಾನ್ಯರು ನಡೆದಾಡುವ ದೇವರೆಂದು ಕರೆಯುತ್ತಾರೆ ಎಂದು ಮಲ್ಲಿಕಾರ್ಜುನ ಆಶ್ರಮ ಟ್ರಸ್ಟ್​ನ ಕಾರ್ಯದರ್ಶಿ ಪ್ರೊ. ಬಿ.ಎ. ಪಾಟೀಲ ಹೇಳಿದರು.

ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಲಿಂ. ವಿಜಯಪುರದ ಸಿದ್ಧೇಶ್ವರ ಶ್ರೀಗಳ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲೇಜು ಆಡಳಿತಾಧಿಕಾರಿ ವಿ.ಎಸ್​. ತುಗಶೆಟ್ಟಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಎಸ್​.ಪಿ. ತಳವಾರ, ಡಾ. ಎ.ಎಂ. ಜಕ್ಕಣ್ಣವರ ಮಾತನಾಡಿದರು. ವಿದ್ಯಾರ್ಥಿಗಳಿಗೆ ಸಿದ್ಧೇಶ್ವರರ ಜೀವನ ಸಾಧನೆ ಕುರಿತ ಪ್ರಬಂಧ ಮತ್ತು ಆಯ್ದ ಪ್ರವಚನಗಳ ಮೇಲೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರೊ.ಜೆ.ಕೆ. ಪಾಟೀಲ, ಪ್ರೊ.ವಿ.ಬಿ.ಬುರ್ಲೆ, ಪ್ರೊ.ಎಸ್​.ಎಸ್​. ಮೋರೆ, ಪ್ರೊ.ಸೋನಾಲಿ ಪಡತರೆ, ಗ್ರಂಥಪಾಲಕ ಪಿ.ಎಂ. ದೊಡಮನಿ, ಪ್ರೊ.ಎಸ್​.ಎಂ. ೂರ್ಪಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net