ಸಿದ್ಧೇಶ್ವರ ಶ್ರೀಗಳ ಗುರುನಮನ 25ರಿಂದ

02
Published on

ಕಾಗವಾಡ: ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ಡಿ.25ರಿಂದ ಜ.2ರ ವರೆಗೆ ಸಿದ್ಧೇಶ್ವರ ಶ್ರೀಗಳ ಎರಡನೇ ಗುರುನಮನ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕವಲಗುಡ್ಡದ ಅಮರೇಶ್ವರ ಮಹಾರಾಜರು ತಿಳಿಸಿದರು.

ತಾಲೂಕಿನ ಜುಗೂಳ ಗ್ರಾಮದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.25ರಿಂದ ಪ್ರಾರಂಭಗೊಳ್ಳಲಿರುವ ಮಹೋತ್ಸವದಲ್ಲಿ 8 ದಿನಗಳು ಜ್ಞಾನದಾಸೋಹ, ಸುಧಾರಿತ ಕೃಷಿ, ಜ್ಞಾನಾರಾಧನೆ, ಗ್ರಾಮ ಸುಂಸಕೃತಿ, ಯೋಗ ಜೀವನ, ಮಾತೃ ಭಕ್ತಿ, ಜಾಗತಿಕ ತಾತ್ವಿಕ ಚಿಂತನೆಗಳ ಜತೆಗೆ ಗುರುದೇವರ ಬದುಕಿನ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಅದರಂತೆ ಜುಗೂಳ ಗ್ರಾಮದಲ್ಲಿ ಜ.10ರಿಂದ 13ರ ವರೆಗೆ ಸಿದ್ಧೇಶ್ವರ ಶ್ರೀಗಳಿಗೆ ಗುರುನಮನ ಜರುಗಲಿದೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಎಂದು ತಿಳಿಸಿದರು. ಚಿಕ್ಕೋಡಿ ಸಿಬಿಕೆಎಸ್‌ಎಸ್ ಕಾರ್ಖಾನೆ ನಿರ್ದೇಶಕ ಅಣ್ಣಾಸಾಹೇಬ ಪಾಟೀಲ ಮಾತನಾಡಿದರು. ಅಭಿನವ ಸಿದ್ದಾನಂದ ಮಹಾರಾಜರು, ಬನಸಿದ್ಧ ಶ್ರೀಗಳು, ಅಣ್ಣಾಸಾಹೇಬ ಪಾಟೀಲ, ತಾತ್ಯಾಸಾಹೇಬ ಪಾಟೀಲ, ಭಾಸ್ಕರ ಪಾಟೀಲ, ಅನಿಲ ಕಡೋಲೆ, ಕಾಕಾಸಾಹೇಬ ಪಾಟೀಲ, ರಾಜು ಕಡೋಲೆ, ಬಾಬಾಸಾಹೇಬ ತಾರದಾಳೆ, ಅವಿನಾಶ ಪಾಟೀಲ, ಸುರೇಶ ಪಾಟೀಲ, ಭೀಮು ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net