ಸಿದ್ಧೇಶ್ವರ ಶ್ರೀ ಸರಳವಾಗಿ ಬದುಕಿದವರು

19Itagi10-web
Published on

ಇಟಗಿ: ಶುದ್ಧ ನಡೆ ನುಡಿ ಮೂಲಕ ಸರಳವಾಗಿ ಬದುಕಿದವರು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಎಂದು ಶೇಗುಣಸಿ ವಿರಕ್ತಮಠದ ಡಾ. ಮಹಾಂತ ಸ್ವಾಮೀಜಿ ಸ್ಮರಿಸಿದರು.

ಸಮೀಪದ ಬೈಲೂರು ನಿಷ್ಕಲ ಮಂಟಪದ ಆವರಣದಲ್ಲಿ ನಿಜಗುಣಾನಂದ ಸ್ವಾಮೀಜಿ ನೇತೃತ್ವದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಿದ್ಧೇಶ್ವರ ಶ್ರೀಗಳ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಿದ್ಧೇಶ್ವರ ಶ್ರೀಗಳ ಆದರ್ಶವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು. ವಿಜಯಪುರದ ಸಂಗಮೇಶ್ವರ ಸ್ವಾಮೀಜಿ ಮಾತನಾಡಿ, ಸಿದ್ಧೇಶ್ವರ ಶ್ರೀಗಳ ಜ್ಞಾನ ಅಪರಿಮಿತವಾಗಿತ್ತು. ಸದಾ ಜ್ಞಾನವನ್ನು ಪ್ರೀತಿಸಿ, ಗೌರವಿಸಿ ಆರಾಧಿಸುತ್ತಿದ್ದರು ಎಂದರು. ವಿಜಯಪುರದ ಬಸಲಿಂಗ ಸ್ವಾಮೀಜಿ ಮಾತನಾಡಿ, ಕಾವಿ ಧರಿಸಿದವರಷ್ಟು ಜ್ಞಾನಿ ನಾನಲ್ಲ. ಹಣ್ಣು ಮಾರಿದರೆ ಬಣ್ಣ ಬರುತ್ತದೆ ಎಂದು ಉತ್ತರಿಸಿದ್ದರು ಎಂದರು. ನಿಜಗುಣಾನಂದ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ, ಮಲ್ಲಯ್ಯ ಸ್ವಾಮೀಜಿ, ತಿಕೋಟಾ ಸ್ವಾಮೀಜಿ, ವಿಜಯಾನಂದ ದೊಡವಾಡ ಮಾತನಾಡಿದರು. ಶಿವಸಂಚಾರ ತಂಡದ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಲಕ್ಷ್ಮೀಬಾಯಿ ಪಾಟೀಲ ಅವರನ್ನು ಸತ್ಕರಿಸಲಾಯಿತು. ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಬೇವಿನಕೊಪ್ಪ ವಿಜಯಾನಂದ ಸ್ವಾಮೀಜಿ, ದೇಗಲೊಳ್ಳಿಯ ವೀರೇಶ್ವರ ದೇವರು, ಮೃತ್ಯುಂಜಯಸ್ವಾಮಿ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net