ಸಿದ್ಧೇಶ್ವರ ಶ್ರೀ ದೊರೆತದ್ದು ನಮ್ಮ ಪುಣ್ಯ

6Uk2
Published on

ಉಳ್ಳಾಗಡ್ಡಿ-ಖಾನಾಪುರ: ಸಿದ್ಧೇಶ್ವರ ಶಿವಾಚಾರ್ಯ ಶ್ರೀಗಳು ನಮಗೆ ದೊರೆತದ್ದು ಪುಣ್ಯ. ಶ್ರೀ ಮಾಟ ಬಸವಣ್ಣ ಶ್ರೀಗಳಿಗೆ ಹೆಚ್ಚು ಶಕ್ತಿ ಕರುಣಿಸಲೆಂದು ಹುಕ್ಕೇರಿ ಗುರುಶಾಂತೇಶ್ವರ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗ್ರಾಮದಲ್ಲಿ ಶ್ರೀ ಮಾಟ ಬಸವಣ್ಣ ದೇವರ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಮರುಳಸಿದ್ಧೇಶ್ವರ ಬೃಹನ್ಮಠದ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ತುಲಾಭಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹುಕ್ಕೇರಿ ಕ್ಯಾರಗುಡ್ಡದ ಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿ, ಅನ್ನ ನೀಡುವ ರೈತನಿಗೆ ಕಾಲಕ್ಕೆ ತಕ್ಕಂತೆ ಮಳೆಯಾಗಿ ಉತ್ತಮ ಫಸಲು ಸಿಗಲಿ. ಗಡಿ ಕಾಯುವ ಸೈನಿಕರು ಚೆನ್ನಾಗಿರಲಿ ಎಂದು ಹಾರೈಸಿದರು. ಉಳ್ಳಾಗಡ್ಡಿ-ಖಾನಾಪುರದ ಸಿದ್ಧೇಶ್ವರ ಸ್ವಾಮೀಜಿ ತುಲಾಭಾರ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಪುಷ್ಪವೃಷ್ಠಿ ಹಾಗೂ ದೀಪ ಬೆಳಗಿಸಿ ಭಕ್ತಿ ಸಮರ್ಪಿಸಿದರು. ಬಳಿಕ ಶ್ರೀಗಳ ಪಾದಪೂಜೆ ಜರುಗಿತು.

ಚಿಕ್ಕೋಡಿ ಸಂಪಾದನಾ ಸ್ವಾಮೀಜಿ, ಹತ್ತರಗಿ ಕಾರಿಮಠದ ಗುರುಸಿದ್ಧೇಶ್ವರ ಸ್ವಾಮೀಜಿ, ನೂಲದ ಗುರುಸಿದ್ಧೇಶ್ವರ ಸ್ವಾಮೀಜಿ, ಹುಕ್ಕೇರಿ ಕ್ಯಾರಗುಡ್ಡದ ಅಭಿನವ ಮಂಜುನಾಥ ಸ್ವಾಮೀಜಿ, ಇಳಕಲ್ ಅನ್ನದಾನ ಶಾಸ್ತ್ರೀ, ಆಡಿಮಠದ ಜಗದ್ಗುರು ಆಡಿ ಸಿದ್ಧೇಶ್ವರ ಸ್ವಾಮೀಜಿ, ಬಸ್ಸಾಪುರ ಗವಿಮಠದ ಗವಿಸಿದ್ಧೇಶ್ವರ ಅಪ್ಪಾಜಿ, ಸಿದ್ದಲಿಂಗಯ್ಯ ಶಾಸ್ತ್ರೀ, ಜೆಡಿಎಸ್ ಮುಖಂಡ ಮಾರುತಿ ಅಷ್ಠಗಿ, ಪ್ರಗತಿಪರ ರೈತ ಮಾರಿಗುಡಿ, ವಿಜಯಲಕ್ಷ್ಮಿ ಮಿರ್ಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net