ಸಿದ್ಧಿ ವಿನಾಯಕ ಭಕ್ತರಿಗೆ ಅನ್ನ ಪ್ರಸಾದ ವಿತರಣೆ

Anna Prasada Vitarane- Hanmu Paaju geleyar Balaga-2
Published on

ಬೀದರ್: ಅಂಗಾರಿಕಾ ಸಂಕಷ್ಟ ಚತುರ್ಥಿ ಪ್ರಯುಕ್ತ ಸಿದ್ಧಿ ವಿನಾಯಕ ದರ್ಶನಕ್ಕೆ ಪಾದಯಾತ್ರೆಯಲ್ಲಿ ರೇಜಂತಲ್ ದೇವಸ್ಥಾನಕ್ಕೆ ತೆರಳಿದ ಭಕ್ತರಿಗೆ ಹಣ್ಮು ಪಾಜಿ ಗೆಳೆಯರ ಬಳಗದ ಸದಸ್ಯರು ನೆರೆಯ ತೆಲಂಗಾಣದ ಮಾಮುಡಗಿ ಸಮೀಪದ ಸಾಯಿ ಧಾಬಾ ಬಳಿ ಅನ್ನ ಪ್ರಸಾದ ವಿತರಿಸಿದರು.

ರಸ್ತೆ ಬದಿಯಲ್ಲಿ ಟೆಂಟ್ ಹಾಕಿದ್ದ ಸದಸ್ಯರು, ಭಕ್ತರಿಗೆ ದಣಿವಾರಿಸಿಕೊಳ್ಳಲು ಆಸನಗಳ ವ್ಯವಸ್ಥೆ ಮಾಡಿದ್ದರು. ಬಾಯಾರಿಕೆ ನೀಗಿಸಿಕೊಳ್ಳಲು ನೀರಿನ ಪಾಕೇಟ್‍ಗಳನ್ನು ಇಟ್ಟಿದ್ದರು.

ನೆರೆಯ ಮಹಾರಾಷ್ಟ್ರ, ಬೀದರ್, ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ, ಔರಾದ್ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಹರಕೆ ಹೊತ್ತು ಪಾದಯಾತ್ರೆಯಲ್ಲಿ ಬಂದ ಭಕ್ತರಿಗೆ ಅನ್ನ ಪ್ರಸಾದ ವಿತರಣೆ ಮಾಡಿದರು.

ಅನ್ನ ದಾಸೋಹ ಶ್ರೇಷ್ಠ ಕಾರ್ಯವಾಗಿದೆ. ಹೀಗಾಗಿ ಭಕ್ತರಿಗೆ ಅನ್ನ ಪ್ರಸಾದ, ಶುದ್ಧ ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ಮಾಡಲಾಗಿತ್ತು ಎಂದು ಚಿತ್ರನಟ ಹಣ್ಮುಪಾಜಿ ತಿಳಿಸಿದರು.

ಸುಮಾರು 2,500ಕ್ಕೂ ಹೆಚ್ಚು ಭಕ್ತರಿಗೆ ಅನ್ನ ಪ್ರಸಾದ ವಿತರಿಸಲಾಗಿದೆ. ಗೆಳೆಯರ ಬಳಗದ ಕಾರ್ಯಕ್ಕೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸಂತಸದಿಂದ ನುಡಿದರು.

ಬಳಗದ ನಾಮದೇವ ಸೋಳಂಕೆ, ನರಸಿಂಗರಾಜ್, ಅನಿಲ್ ಸೋಳಂಕೆ, ಅಕ್ಷಯ ರೆಡ್ಡಿ, ಸಂಗಮೇಶ ಶಹಾಪುರ, ಕಿರಣ ಚಿಟ್ಟಾ, ಅಂಬುಜೆ, ರಾಕೇಶ, ವಿಕ್ಕಿ, ಬಸ್ಸು ಚಿಮಕೋಡ್ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net