ಸಿದ್ಧಾರೂಢರ ಗದ್ದುಗೆ ದರ್ಶನಕ್ಕೆ ಅವಕಾಶ

h7-Siddarud Math 2
Published on

ಹುಬ್ಬಳ್ಳಿ: ಪ್ರಸಿದ್ಧ ಶ್ರೀ ಸಿದ್ಧಾರೂಢ ಮಠದಲ್ಲಿ ಭಕ್ತರಿಗೆ ಸೋಮವಾರದಿಂದ ಗದ್ದುಗೆ ದರ್ಶನಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ.

ಲಾಕ್​ಡೌನ್ ಹಿನ್ನೆಲೆಯಲ್ಲಿ ಸುಮಾರು ಎರಡೂವರೆ ತಿಂಗಳಿಂದ ದರ್ಶನಕ್ಕೆ ಅವಕಾಶವಿರಲಿಲ್ಲ. ಈಗಲೂ ಸಹ ಭಕ್ತರು ಕೆಲವು ನಿಯಮಗಳನ್ನು ಪಾಲಿಸಬೇಕು. ಶ್ರೀ ಸಿದ್ಧಾರೂಢರು ಹಾಗೂ ಶ್ರೀ ಗುರುನಾಥಾರೂಢರ ಗದ್ದುಗೆಯನ್ನು ರ್ಸ³ಸುವಂತಿಲ್ಲ ಹಾಗೂ ಒಳಗೆ ಪ್ರವೇಶ ಇರುವುದಿಲ್ಲ. ದೂರದಿಂದಲೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪರಸ್ಪರ ಅಂತರ ಕಾಯ್ದುಕೊಳ್ಳಲು ಗುರುತು ಮಾಡಲಾಗಿದೆ. ಸಾಮಾನ್ಯ ದಿನಗಳಲ್ಲಿ ಸೋಮವಾರದಂದು ಸಿದ್ಧಾರೂಢ ಮಠದಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ.

ದರ್ಶನದ ಹಿನ್ನೆಲೆಯಲ್ಲಿ ಭಾನುವಾರ ಗದ್ದುಗೆಯ ಬೆಳ್ಳಿ ಮಂಟಪವನ್ನು ಪರಿಶೀಲಿಸಲಾಯಿತು. ಅಗತ್ಯವಿರುವ ಸಣ್ಣಪುಟ್ಟ ದುರಸ್ತಿ ಮಾಡಿ ಸ್ವಚ್ಛಗೊಳಿಸಿ ಇಡಲಾಯಿತು.

ನಗರದ ವಿವಿಧೆಡೆ ದೇವಾಲಯ, ಮಠ- ಮಂದಿರಗಳು ಭಕ್ತರ ದರ್ಶನಕ್ಕೆ ತೆರೆದುಕೊಳ್ಳಲಿದ್ದು, ಭಾನುವಾರ ಆಯಾ ಸಮಿತಿಯವರು ಎಲ್ಲೆಡೆ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ.

ಸೋಮವಾರ ಸಂಕಷ್ಟಿ ಇರುವುದರಿಂದ ಗಣಪತಿ ದೇವಾಲಯಗಳಲ್ಲಿ ವಿಶೇಷ ಸಿದ್ಧತೆಗಳನ್ನು ಮಾಡಲಾಯಿತು.

ಲಾಕ್​ಡೌನ್​ನಿಂದಾಗಿ ಸ್ಥಗಿತಗೊಂಡಿದ್ದ ಮಾಲ್​ಗಳು ಸಹ ಸೋಮವಾರದಿಂದ ಗ್ರಾಹಕರಿಗೆ ಮುಕ್ತವಾಗುತ್ತವೆ. ಆದರೆ, ಪರಸ್ಪರ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಸರ್ಕಾರ ವಿಧಿಸಿರುವ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net