ಸಿದ್ಧಾರೂಢ ಮಠದಲ್ಲಿ ಗುರು ಪೂರ್ಣಿಮೆ

Shivkumar Swamiji Photo (1)
Published on

ಬೀದರ್: ಇಲ್ಲಿಯ ಸಿದ್ಧಾರೂಢ ಮಠದಲ್ಲಿ ಜುಲೈ 3 ರಂದು ಗುರು ಪೂರ್ಣಿಮೆ ಮಹೋತ್ಸವ ಜರುಗಲಿದೆ.
ಬೆಳಿಗ್ಗೆ 6 ರಿಂದ 8 ರ ವರೆಗೆ ಸಿದ್ಧಾರೂಢರ ಮಹಾ ರುದ್ರಾಭಿಷೇಕ, ಬೆಳಿಗ್ಗೆ 9ಕ್ಕೆ ಗುರು ಸ್ತೋತ್ರ, ಭಜನೆ, ಬೆಳಿಗ್ಗೆ 10.30ಕ್ಕೆ ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ ಅವರಿಂದ ಪ್ರವಚನ ನಡೆಯಲಿದೆ.
ಬಳಿಕ ಮಠದ ಸಾಧಕ-ಸಾಧಕಿಯರು ಷೋಡಶೋಪಚಾರ ಮೂಲಕ ಶ್ರೀಗಳ ಪಾದಪೂಜೆ, ಸುವರ್ಣ ಕಿರೀಟ ತೊಡಿಸುವಿಕೆ ಹಾಗೂ ಕನಕ ಪುಷ್ಪವೃಷ್ಟಿ ಮಾಡುವರು.
ಕಸ್ತೂರಬಾಯಿ ಬಸವಂತರಾವ್ ಪಡನೂರ, ಮೀನಾಕುಮಾರಿ ಶಿವರಾಜ ಬಿರಾದಾರ, ಮಹಾಲಕ್ಷ್ಮಿ ಆಂಜನೇಯ ಗಣಿಕಲ್ ಹಾಗೂ ಇಂಡಿಯ ಶ್ರೀದೇವಿ ಗಂಗಾಧರ ಕಾಪಸೆ ಅವರು ನಾಣ್ಯಗಳಿಂದ ಶ್ರೀಗಳ ತುಲಾಭಾರ ಮಾಡುವರು.
ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸದ್ಗುರುವಿನ ಕೃಪೆಗೆ ಪಾತ್ರರಾಗಬೇಕು ಎಂದು ಡಾ. ಚಂದ್ರಪ್ಪ ಭತಮುರ್ಗೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net