ಸಿದ್ಧಾರೂಢ ಮಠ ಟ್ರಸ್ಟ್, ಧರ್ಮದರ್ಶಿ ಆಯ್ಕೆಗೆ ಅರ್ಜಿ ಆಹ್ವಾನ

Siddaruda math (3)
Published on

ಹುಬ್ಬಳ್ಳಿ: ಇಲ್ಲಿಯ ಪ್ರಸಿದ್ಧ ಶ್ರೀ ಸಿದ್ಧಾರೂಢಸ್ವಾಮಿ ಮಠ ಟ್ರಸ್ಟ್ ಕಮಿಟಿ ಧರ್ಮದರ್ಶಿಗಳ ಆಡಳಿತ ಅವಧಿ ಮಾರ್ಚ್ 31ಕ್ಕೆ ಕೊನೆಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ 5 ವರ್ಷಗಳ ಅವಧಿಗೆ ಹೊಸ ಧರ್ಮದರ್ಶಿಗಳ ಆಯ್ಕೆಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಗರಿಷ್ಠ 17 ಧರ್ಮದರ್ಶಿಗಳನ್ನೊಳಗೊಂಡ ಟ್ರಸ್ಟ್ ಕಮಿಟಿಯಲ್ಲಿ 11 ಜನ ಹುಬ್ಬಳ್ಳಿ ನಗರದವರೇ ಇರಬೇಕು. ಅಧಿಸೂಚನೆ ಜತೆಗೆ ಅರ್ಜಿ ನಮೂನೆ ಹಾಗೂ ಅಂಶಗಳನ್ನು ಕೂಲಂಕಷವಾಗಿ ಗಮನಿಸಿ ಸಾರ್ವಜನಿಕರು, ಸ್ವಾಮಿಯ ಭಕ್ತರು ಅರ್ಜಿ ಸಲ್ಲಿಸಬಹುದು. ಧರ್ಮದರ್ಶಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಪ್ರಭಾವಕ್ಕೆ ಅವಕಾಶ ಇರುವುದಿಲ್ಲ.

ಧರ್ಮದರ್ಶಿತ್ವ ಬಯಸುವವರು ಭರ್ತಿ ಮಾಡಿದ ಅರ್ಜಿಯನ್ನು ಫೆಬ್ರವರಿ 25ರೊಳಗೆ ಮುಖ್ಯ ಆಡಳಿತಾಧಿಕಾರಿಗಳು, ಶ್ರೀ ಸಿದ್ಧಾರೂಢ ಸ್ವಾಮಿಮಠ ಟ್ರಸ್ಟ್ ಕಮಿಟಿ, ಹುಬ್ಬಳ್ಳಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಧಾರವಾಡ ಇವರಿಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸತಕ್ಕದ್ದು ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರು ಹಾಗೂ ಮುಖ್ಯ ಆಡಳಿತಾಧಿಕಾರಿಯಾದ ಕೆ.ಜಿ. ಶಾಂತಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net