

ಕಲಬುರಗಿ: ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿರುವ ದಾಸೋಹ ಮಹಾಮನೆಯಲ್ಲಿ ಮಹಾದಾಸೋಹ ಸಿದ್ಧಾಂತ ಶಿರೋಮಣಿ ಶೀರ್ಷಿಕೆಯ ಹಿಂದಿ ಭಾಷೆಯ ಅಭಿನಂದನಾ ಗ್ರಂಥವನ್ನು ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಆದ ಶರಣಬಸವ ವಿವಿಯ ಕುಲಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ಮಹಾದಾಸೋಹ ಜೀವನ ಆಧರಿಸಿ ಹಿಂದಿಯಲ್ಲಿ ಅವತರಣಿಕೆ ಮಾಡಿ ಕೃತಿ ಸಿದ್ಧಪಡಿಸಲಾಗಿದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ೯ನೇ ಪೀಠಾಧಿಪತಿ ಪೂಜ್ಯ ಚಿ.ದೊಡ್ಡಪ್ಪ ಅಪ್ಪಾ ಸಾನ್ನಿಧ್ಯ ವಹಿಸಿದ್ದರು.
ಬೆಳಗುಂಪಾದ ಶ್ರೀ ಅಭಿನವ ಪರ್ವತೇಶ್ವರ ಶಿವಾಚಾರ್ಯರು ಗ್ರಂಥ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು. ಅಭಿನಂದನಾ ಗ್ರಂಥವನ್ನು ಸುಂದರವಾಗಿ ಮುದ್ರಿಸಿದ ಬೆಂಗಳೂರಿನ ಲಕ್ಷ್ಮೀ ಮುದ್ರಣಾಲಯದ ಕೆ. ಎಸ್.ಮಂಜು ಅವರಿಗೆ ಸಂಸ್ಥೆಯಿAದ ಸನ್ಮಾನಿಸಲಾಯಿತು.
ಖ್ಯಾತ ಚಿಂತಕ ವಿಶ್ವಯಾತ್ರಿ ಅಲಿಗಢ್‌ನ ಡಾ.ಲಾರಿ ಆಜಾದ್ ಮುಖ್ಯ ಭಾಷಣ ಮಾಡಿದರು. ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿವಿ ಕುಲಪತಿ ಡಾ.ನಿರಂಜನ್ ನಿಷ್ಠಿ, ಸಮಕುಲಪತಿ ಪ್ರೊ.ವಿ.ಡಿ.ಮೈತ್ರಿ, ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಕುಲಸಚಿವ (ಮೌಲ್ಯಮಾಪನ) ಡಾ.ಬಸವರಾಜ ಮಠಪತಿ, ಅಭಿನಂದನಾ ಗ್ರಂಥದ ಪ್ರಧಾನ ಸಂಪಾದಕ ಡಾ.ಎಸ್.ಎಂ.ಹಿರೇಮಠ, ಸಂಪಾದಕಿ ಮಂಗಲಾ ಕಪರೆ, ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ, ಡಾ. ಅಲ್ಲಮಪ್ರಭು ದೇಶಮುಖ ಇತರರಿದ್ದರು.