ಸಿದ್ಧಲಿಂಗ ಸ್ವಾಮೀಜಿ ವಿರುದ್ಧ ಕೇಸ್

ANDOLAN SREEE PHOTO (1)
Published on

ಕಲಬುರಗಿ: ದಲಿತ ಹೋರಾಟಗಾರರ ವಿರುದ್ಧ ಅವಮಾನಕರವಾಗಿ ಮಾತನಾಡಿದ್ದಾರೆ ಎಂದು ಆಂದೋಲಾ ಶ್ರೀಗಳ ವಿರುದ್ಧ ನಗರದ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪೊಲೀಸರು ಅವರನ್ನು ಬಂಧಿಸಿ, ಗಡಿಪಾರು ಮಾಡಬೇಕು ಎಂದು ದಲಿತ ಸಮನ್ವಯ ಸಮಿತಿ ಮುಖಂಡ ಎ.ಬಿ.ಹೊಸಮನಿ ಆಗ್ರಹಿಸಿದ್ದಾರೆ. ವಿಡಿಯೋ ಒಂದರಲ್ಲಿ ನೋಡಿದಂತೆ ದಲಿತ ಹೋರಾಟಗಾರರ ಕುರಿತು `ಮನೆಯಲ್ಲಿ ತಿನ್ನಲು ಅನ್ನ ಇಲ್ಲ, ದುಡಿಮೆ ಇದ್ರೆನೇ ಅನ್ನ ಇರುತ್ತಲ್ಲ, ದುಡಿಮೇನೇ ಬೇಕಾಗಿಲ್ಲ ಅವರಿಗೆ' ಎನ್ನುವ ಮೂಲಕ ಅವಮಾನ ಮಾಡಿದ್ದಾರೆ. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ದೂರು ದಾಖಲಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಿತಿ ಮುಖಂಡ ಪ್ರಕಾಶ ಮೂಲಭಾರತಿ ಮಾತನಾಡಿ, ಸ್ವಾಮೀಜಿಗಳು ಹಿತವಚನ, ಪ್ರವಚನ ನೀಡುವುದು ಬಿಟ್ಟು, ರಾಜಕೀಯ ಮಾತಾಡಿ ಗೌರವ ಕಳೆದುಕೊಳ್ಳುತ್ತಿದ್ದಾರೆ. ನೇರವಾಗಿ ರಾಜಕೀಯಕ್ಕೆ ಬರಲಿ. ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ದಲಿತರ ಬಗ್ಗೆ ಸಲ್ಲದ ಹೇಳಿಕೆ ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸ್ವಾಮೀಜಿ ವಿರುದ್ಧ ಇರುವ ಎಲ್ಲ ಹಳೇ ಪ್ರಕರಣಗಳನ್ನು ಕ್ರೂಢೀಕರಿಸಿ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹೇಳಿದರು. ಸಂಘಟನೆಯ ಸಂತೋಷ ಮೇಲ್ಮನಿ, ದೇವಿಂದ್ರ ಸಿನ್ನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net