ಸಿದ್ಧಗೊಳ್ಳುತ್ತಿದೆ ಮೂಗಬಸವೇಶ್ವರ ರಥ

july 28 kottur 01
Published on

ಕೊಟ್ಟೂರು: ರಾಂಪುರ ಚಿರಬಿ ಮೂಗಬಸವೇಶ್ವರ ಜಾತ್ರೆ 18 ವರ್ಷಗಳ ಬಳಿಕ ನಡೆಯಲಿದ್ದು, ಸಿದ್ಧತೆ ಭರದಿಂದ ಸಾಗಿದೆ. ಆ.18ರಂದು ರಥೋತ್ಸವ ನಡೆಯಲಿದೆ.

ಕಳೆದ 18 ವರ್ಷಗಳಿಂದ ತೇರು ಮನೆಯಲ್ಲಿದ್ದ ರಥವನ್ನು ಭಕ್ತರ ಸಹಕಾರದೊಂದಿಗೆ ಹೊರಗೆ ಎಳೆತರಲಾಗಿದೆ. ರಥದ ಕಲ್ಲಿನ ಗಾಲಿ ಮತ್ತು ಅಚ್ಚು ಪರೀಕ್ಷೆ ಮಾಡಲಾಗಿದ್ದು, ಗಾಲಿಗಳಿಗೆ ಗ್ರೀಸ್ ಹಚ್ಚಿ ದುರಸ್ತಿ ಕಾರ್ಯ ಮುಗಿಸಲಾಗಿದೆ. ರಥದ ಮೇಲ್ಭಾಗದಲ್ಲಿ ಕಟ್ಟಲು ದೇವತೆಗಳ ಚಿತ್ರಗಳನ್ನು ಸಿದ್ಧಪಡಿಸಲು ಚಿತ್ರ ಕಲಾವಿದರಿಗೆ ಸೂಚಿಸಲಾಗಿದೆ.

ಮೂಗಬಸವೇಶ್ವರ ಸ್ವಾಮಿ ದೇವಾಲಯ ಹಾಗೂ ಆವರಣದೊಳಗೆ ಬಣ್ಣ ಬಳಿಯಲಾಗಿದ್ದು, ರಥೋತ್ಸವಕ್ಕೂ ಮುನ್ನ ದೇವಾಲಯ ವ್ಯಾಪ್ತಿಯ ಜಾಗ ಸ್ವಚ್ಛಗೊಳಿಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಜಾತ್ರೆ ನಡೆಯುವ ಬಗ್ಗೆ ನಿರ್ಧಾರ ಪ್ರಕಟಿಸಿದ ನಂತರ ಭಕ್ತರು ತಂಡೋಪತಂಡವಾಗಿ ಶ್ರೀ ಮೂಗಬವೇಶ್ವರಸ್ವಾಮಿ ದರ್ಶನಕ್ಕೆ ಆಗಮಿಸುತ್ತಿದ್ದು, ಪ್ರತಿ ಸೋಮವಾರ ಮತ್ತು ಅಮಾವಾಸ್ಯೆ ದಿನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net