ಸಿದ್ದೇಶ್ವರ ಶ್ರೀಗಳದ್ದು ಸರಳ, ಸಹೃದಯ ವ್ಯಕ್ತಿತ್ವ

13blrp1
Published on

ಬೇಲೂರು: ಸರಳತೆ, ಸಹೃದಯತೆಯೊಂದಿಗೆ ಯಾರಿಗೂ ಹೋಲಿಕೆ ಮಾಡಲಾಗದ ಮಹೋನ್ನತ ವ್ಯಕ್ತಿತ್ವ ವಿಜಯಪುರದ ಜ್ಞಾನಯೋಗಿ ಆಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರದ್ದು. ಜಗತ್ತಿಗೆ ಮಾರ್ಗದರ್ಶನ ಮಾಡಿ ಲಿಂಗೈಕ್ಯರಾದರೂ ಇಂದಿಗೂ, ಎಂದೆಂದಿಗೂ ನಮ್ಮೊಂದಿಗೆಯೇ ಇರುತ್ತಾರೆ ಎಂದು ಕದಳಿ ಮಹಿಳಾ ವೇದಿಕೆ ರಾಜ್ಯ ಉಪ ಸಂಚಾಲಕಿ ತೀರ್ಥಕುಮಾರಿ ಅಭಿಪ್ರಾಯಪಟ್ಟರು.


ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಇತ್ತೀಚೆಗೆ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.


ಸಿದ್ದೇಶ್ವರ ಶ್ರೀಗಳು ನಮಗೆ ಬಿಟ್ಟು ಹೋಗಿರುವ ತತ್ವ, ಆದರ್ಶಗಳು ಇಂದಿನ ಹಾಗೂ ಮುಂದಿನ ಪೀಳಿಗೆಗೂ ದಾರಿ ದೀಪವಾಗಿದ್ದು, ಅವರಂತೆ ಎಲ್ಲರೂ ಬಾಳಿದರೆ ಸಮಾಜದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಎಂದರು.


ತಾಲೂಕು ಶರಣ ಸಾಹಿತ್ಯ ಪರಿಷತ್ತು ಯುವ ಘಟಕ ಅಧ್ಯಕ್ಷ ಆರ್.ಎಸ್.ಮಹೇಶ್ ಮಾತನಾಡಿ, ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ತಮ್ಮ ಪ್ರವಚನದ ಮೂಲಕ ಇಡೀ ಮುನುಕುಲದ ಉದ್ಧಾರಕ್ಕೆ ಶ್ರಮಿಸಿದವರು. ಅವರ ಸೇವೆ ಅಮೋಘವಾದದು. ಸ್ವಾಮೀಜಿಗಳ ಅಗಲಿಕೆ ದೇಶ ಹಾಗೂ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದರು.


ಪರಿಷತ್ತು ಪದಾಧಿಕಾರಿ ಹಾಗೂ ನಿವೃತ್ತ ಶಿಕ್ಷಕ ಧನಂಜಯ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಲ್.ರಾಜೇಗೌಡ, ಕಸಾಪ ಮಾಜಿ ಗೌರವಾಧ್ಯಕ್ಷ ಹೆಬ್ಬಾಳು ಹಾಲಪ್ಪ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಚಂದನ ಕುಮಾರ್, ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಹೇಮಾ ವಿರೂಪಾಕ್ಷ, ನಿವೃತ್ತ ಶಿಕ್ಷಕಿ ಸೌಭಾಗ್ಯ, ಮಲ್ಲಿಕಾರ್ಜುನ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net