ಸಿದ್ದೇಶ್‌ಯಾದವ್ ನಿಧನ

978d9862-7307-4139-b663-f29d1e3f4b86--01
Published on

ಚಿತ್ರದುರ್ಗ:ಬಿಜೆಪಿ ಬಳ್ಳಾರಿ ಜಿಲ್ಲಾ ಪ್ರಭಾರಿ,ಚಿತ್ರದುರ್ಗ ಜಿಲ್ಲೆಯ ಬಿಜೆಪಿ ಮುಖಂಡ ಸಿದ್ದೇಶ್ ಯಾದವ್(50)ಅವರು ಸೋಮ ವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಮಲ್ಲೇಶ್ವರಂ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಕರೆದಿದ್ದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ಅವರಿಗೆ ಮಧ್ಯಾಹ್ನ ಎದೆ ನೋವು ಕಾಣಿಸಿಕೊಂಡಿದ್ದು,ಅಲ್ಲೇ ಕುಸಿದು ಬಿದ್ದ ಅವರನ್ನು ಕೂಡಲೇ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ಯದರು ಪ್ರಯೋಜನವಾಗಿಲ್ಲ.

ಅವರಿಗೆ ಪತ್ನಿ,ಇಬ್ಬರು ಪುತ್ರರು ಇದ್ದಾರೆ. ಮೂಲತಃ ಹಿರಿಯೂರು ತಾಲೂಕು ಬಸಪ್ಪನಮಾಳಿಗೆಯ ಅವರು ಚಿತ್ರದುರ್ಗದಲ್ಲಿ ವಾಸವಿದ್ದರು. ಎಬಿವಿಪಿ ಸಂಘಟನೆಯಲ್ಲಿದ್ದ ಅವರು ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ,ರಾಜ್ಯ ಸ್ಲಂ ಮೋರ್ಚಾ ಉಪಾಧ್ಯಕ್ಷರಾಗಿ,ಹಿಂದುಳಿದ ವರ್ಗಗಳ ಪ್ರಧಾನ ಕಾರ‌್ಯದರ್ಶಿ ಸೇರಿದಂತೆ ಪಕ್ಷದ ಹುದ್ದೆಗಳಲ್ಲಿ ಸಕ್ರಿಯವಾಗಿ ಪಕ್ಷದ ಸಂಘಟನೆಗಳಲ್ಲಿ ತೊಡಗಿಸಿ ಕೊಂಡಿದ್ದರು. ಹಿರಿಯೂರು ವಿಧಾನಸಭಾ ಕ್ಷೇತ್ರದಿಂದಲೂ ಈ ಹಿಂದೆ ಸ್ಪರ್ಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net