ಸಿದ್ದು ಸರ್ಕಾರ ರೈತರು, ಬಡವರಿಗೆ ಮರಣಶಾಸನ

bkt-17-1 a
ಬಾಗಲಕೋಟೆ ನಗರದಲ್ಲಿ ಗುರುವಾರ ಬೆಳಗ್ಗೆ ಬಿಜೆಪಿ ಜನಾಕ್ರೋಶ ಯಾತ್ರೆಯಲ್ಲಿ ಅಂಬೇಡ್ಕರ ಪುತ್ಥಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಮಾಲಾರ್ಪಣೆ ಮಾಡಿದರು. ವಿ.ಪ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಗೋವಿಂದ ಕಾರಜೋಳ, ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ವೀರಣ್ಣ ಚರಂತಿಮಠ ಇತರರು ಇದ್ದರು.
Published on

ಬಾಗಲಕೋಟೆ: ಅಹಿಂದ ಹೆಸರಿನಲ್ಲಿ ಅಽಕಾರ ಪಡೆದಿರುವ ಸಿದ್ದರಾಮಯ್ಯ ಸರ್ಕಾರ, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಅಭಿವೃದ್ಧಿಗೆ ಬಳಕೆ ಆಗಬೇಕಿದ್ದ ೩೮ ಸಾವಿರ ಕೋಟಿ ರೂ.ಗಳನ್ನು ಬೇರೆ ಕಡೆ ವರ್ಗಾವಣೆ ಮಾಡಿ ಜನವಿರೋಽ ಆಡಳಿತ ನಡೆಸಿದೆ. ಯಾವುದೇ ಹೊಸ ಯೋಜನೆ ರೂಪಿಸದೇ ರೈತರು, ಬಡವರ ಪಾಲಿಗೆ ಮರಣಶಾಸನ ಬರೆದಿದೆ. ಇಂತ ದರಿದ್ರ ಸರ್ಕಾರವನ್ನು ಬುಡಸಮೇತ ಕಿತ್ತೋಗೆಯಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ನೀಡಿದರು.

ನಗರದ ಬಸವೇಶ್ವರ ವೃತ್ತದ ಬಳಿಕ ಗುರುವಾರ ಬಿಜೆಪಿ ಜನಾಕ್ರೋಶ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ ನೀವು ಸುದೀರ್ಘ ಮುಖ್ಯಮಂತ್ರಿ ಆಗಿದ್ದೇನೆ ಎನ್ನುವುದು ಮುಖ್ಯವಲ್ಲ. ಆ ಸ್ಥಾನದಲ್ಲಿ ಕುಳಿತು ಎಷ್ಟು ಪ್ರಮಾಣದಲ್ಲಿ ರೈತರು, ಬಡವರು, ಹಿಂದುಳಿದವರ ಕಣ್ಣೀರ ಒರೆಸಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ. ಮುಂದೆ ನಿಮ್ಮನ್ನು ಜನರು ಯಾವ ಕಾರಣಕ್ಕೆ ನೆನಪಿಸಿಕೊಳ್ಳಬೇಕು? ಅಽಕಾರ ಇದ್ದಾಗ ಹಿಂದುಗಳಿಗೆ ಅಪಮಾನ ಮಾಡಿ ಮುಸ್ಲಿಂರನ್ನು ತುಷ್ಠಿಕರಿಸಿದ್ದಕ್ಕೆ ನೆನಪಿಸಿಕೊಳ್ಳಬೇಕಾ? ನಿಮ್ಮ ಆಡಳಿತದಲ್ಲಿ ರಾಜ್ಯದಲ್ಲಿ ಗೋಹತ್ಯೆ ಹೆಚ್ಚಳ ಆಗಿದ್ದಕ್ಕೆ, ಮಹಿಳೆಯರಿಗೆ ರಕ್ಷಣೆ ಇಲ್ಲದ್ದಕ್ಕೆ ನೆನಪಿಸಿಕೊಳ್ಳಬೇಕಾ? ಬಿಜೆಪಿ ಸರ್ಕಾರ ಇದ್ದಾರ ರೈತರಿಗೆ ೨೫ ಸಾವಿರ ರೂ.ಗೆ ಸಿಗುತ್ತಿದ್ದ ವಿದ್ಯುತ್ ಪರಿವರ್ತಕವನ್ನು ೨.೫ಯಿಂದ ೩ ಲಕ್ಷಕ್ಕೆ ಹೆಚ್ಚಿಸಿದಕ್ಕಾ ಅಥವಾ ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮ ಮಾಡುತ್ತೇನೆಂದು ಬೆಂಕಿ ಹಚ್ಚಿದ್ದಕ್ಕೆ ನಿಮ್ಮನ್ನು ನೆನಪಿಸಿಕೊಳ್ಳಬೇಕಾ? ಹೇಳಿ ಸಿದ್ದರಾಮಯ್ಯ ಅವರೇ ಎಂದು ಚಾಟಿ ಬೀಸಿದರು.

ಮಿತಿಮೀರಿದ ಭ್ರಷ್ಟಾಚಾರ, ಬೆಲೆ ಏರಿಕೆ, ನೀವು ಕೊಟ್ಟ ಭರವಸೆ ಹುಸಿಗೊಳಿಸಿದ್ದಕ್ಕೆ ಜನಜಾಗೃತಿ ಮೂಡಿಸಲು ಬಿಜೆಪಿ ಈ ಜನಾಕ್ರೋಶ ಯಾತ್ರೆಯನ್ನು ಆರಂಭಿಸಿದೆ. ಇದು ನಮ್ಮ ಕರ್ತವ್ಯ ಕೂಡ. ನಿಮ್ಮ ಜನವಿರೋಽ ನೀತಿ ನೋಡಿಯೂ ಸುಮ್ಮನಿದ್ದರೆ ವಿಪಕ್ಷವಾಗಿ ನಾವು ಇದ್ದು ಸತ್ತಂತೆ. ಆ ಭಗವಂತನೂ ನಮ್ಮನ್ನು ಕ್ಷಮಿಸಲ್ಲ. ಹೀಗಾಗಿ ಜನಜಾಗೃತಿ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ ಎಂದರು.

ನಗರದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಯಾತ್ರೆಗೆ ಚಾಲನೆ ನೀಡಿದ ವಿಜಯೇಂದ್ರ ಅವರು, ಎತ್ತಿನ ಬಂಡಿ ಹತ್ತಿ ಹೆಗಲಿಗೆ ಹಸಿರು ಟಾವಲ್ ಹಾಕಿಕೊಂಡು ಬಾರಕೋಲ್ ಬೀಸುವ ಮೂಲಕ ಯಾತ್ರೆಯಲ್ಲಿ ಪಾಲ್ಗೊಂಡರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಜಗದೀಶ್ ಗುಡಗುಂಟಿ, ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಹನಮಂತ ನಿರಾಣಿ, ಎನ್.ರವಿಕುಮಾರ, ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net