ಸಿದ್ದು ರಾಜೀನಾಮೆಗೆ ಎಂಎಲ್‌ಸಿ ಒತ್ತಾಯ

CTD K.S.NAVIN--000
Published on

ಚಿತ್ರದುರ್ಗ:ಮುಡಾ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕೆಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಗರಣದಲ್ಲಿ ಸಿದ್ದ ರಾಮಯ್ಯ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಹಿಂದಿನ ಮುಖ್ಯಮಂತ್ರಿಗಳು ಅನೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ಎದುರಿಸಿದ್ದಾರೆ. ಪದೆಪದೇ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿ ಕೊಳ್ಳುವ, ತಮ್ಮ ಜೀವನ ತೆರೆದ ಪುಸ್ತಕ ಎನ್ನುವ ಸಿದ್ದರಾಮಯ್ಯ,ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕೆಂದ ಅವರು, ಸಿದ್ದ ರಾಮಯ್ಯ ಗಾಭರಿಯಾಗಿದ್ದಾರೆ, ಮಾನಸಿಕವಾಗಿ ಅವರಿಗೆ ಹಿಂಜರಿತ ಉಂಟಾಗಿದೆ ಎಂದರು.
ಈ ಕಾಂಗ್ರೆಸ್ ಸರ್ಕಾರ ಹಗರಣಗಳ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ತಾರ್ಕೀಕ ಅಂತ್ಯಕ್ಕೆ ಕೊಂಡೊಯ್ಯ ಬೇಕಿದೆ. ಹೆಚ್ಚು ಚರ್ಚೆಯಾಗಿದ್ದಲ್ಲೇ ಪಾದಯಾತ್ರೆಯಂಥ ಹೋರಾಟ ಜತೆಗೆ ಕಾನೂನಾತ್ಮಕವಾಗಿಯೂ ಭ್ರಷ್ಟ ಸರ್ಕಾರದ ವಿರುದ್ಧ ಸಮರ್ಪಕವಾಗಿ ಹೋರಾಡ ಬೇಕಿದೆ.
ಆಗಸ್ಟ್ 3ರಿಂದ ಬೆಂಗಳೂರಿಂದ ಮೈಸೂರುವರೆಗೆ ಪಾದಯಾತ್ರೆ ನಡೆಸಲು ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ತೀ ರ್ಮಾನವಾಗಿತ್ತು. ಈಗ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಅಚ್ಚರಿ ತರಿಸಿದೆ. ಬಿಜೆಪಿ ರಾಜ್ಯ,ಕೇಂದ್ರ ನಾಯಕರು ಅವ ರೊಂದಿಗೆ ಚರ್ಚಿಸುತ್ತಾರೆ. ಎರಡೂ ಪಕ್ಷಗಳ ಉದ್ದೇಶ ಭ್ರಷ್ಟ ಕಾಂಗ್ರೆಸ್ ವಿರುದ್ಧ ಹೋರಾಡುವುದಾಗಿದೆ. ಎನ್‌ಡಿಎ ಮೈತ್ರಿಯಿಂದ ಪಾ ದಯಾತ್ರೆ ಮಾಡಿದರೆ ಹೋರಾಟಕ್ಕೆ ಶಕ್ತಿ ಬರಲಿದೆ. ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರನ್ನು ವಿಶ್ವಾಸಕ್ಕೆ ಬಿಜೆಪಿ ಪಡೆಯಲಿದೆ.
ಕರ್ನಾಟಕ ಮಹರ್ಷಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಹಗರಣ ವಿರೋಧಿಸಿ ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಈ ಹಿಂದೆ ಪಾದಯಾತ್ರೆ ನಡೆಸಲು ಉದ್ದೇಶಿಸಿದ್ದರು. ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಅ ವರು ಪ್ರತ್ಯೇಕವಾಗಿ ಪಾದಯಾತ್ರೆ ಮಾಡುವುದಾಗಿ ಹೇಳಿದ್ದಾರೆ. ಪಾದಯಾತ್ರೆಗೆ ಅವರ ವಿರೋಧವಿಲ್ಲ,ಇದರಿಂದ ಉದ್ದೇಶಿತ ಚಳವಳಿಗೆ ಹೆಚ್ಚಿನ ಶಕ್ತಿ ಬರಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net