ಸಿದ್ದಾಪುರ ಯೂನಿಟ್ ಚಾಂಪಿಯನ್

ಚಿತ್ರ 17ಎಸ್ ಡಿ ಪಿ 01,
Published on

ಸಿದ್ದಾಪುರ : ಎಸ್‌ಕೆಎಸ್‌ಎಸ್‌ಎಫ್ ಸಿದ್ದಾಪುರ ವಲಯ ಮಟ್ಟದ ಇಸ್ಲಾಮಿಕ್ ಕಲೋತ್ಸವದಲ್ಲಿ ಸಿದ್ದಾಪುರ ಯೂನಿಟ್ ಚಾಂಪಿಯನ್ ಪ್ರಶಸ್ತಿ ಅಲಂಕರಿಸಿದೆ. ನೆಲ್ಲಿಹುದಿಕೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಿದ್ದಾಪುರ ವಲಯ ಮಟ್ಟದ ಇಸ್ಲಾಮಿಕ್ ಕಲೋತ್ಸವದಲ್ಲಿ ಸಿದ್ದಾಪುರ ಯೂನಿಟ್ 337 ಅಂಕಗಳೊಂದಿಗೆ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡರು.

ದ್ವಿತೀಯ ಸ್ಥಾನವನ್ನು 319 ಅಂಕಗಳೊಂದಿಗೆ ನೆಲ್ಲಿಹುದಿಕೇರಿ ಯೂನಿಟ್ ಪಡೆದುಕೊಂಡಿತ್ತು. ಒಟ್ಟು ಆರು ಯೂನಿಟ್ ಗಳು ಭಾಗವಹಿಸಿದ್ದ ಇಸ್ಲಾಮಿಕ್ ಕಲೋತ್ಸವದಲ್ಲಿ ಸಬ್ ಜೂನಿಯರ್, ಜನರಲ್ ಜೂನಿಯರ್, ಜನರಲ್ ಸೀನಿಯರ್, ಜನರಲ್ ಸೂಪರ್ ಸೀನಿಯರ್ ಹಾಗೂ ಜನರಲ್ ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯಿತು. ಒಟ್ಟು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿದ್ದಾಪುರ ವಲಯ ಮಟ್ಟದ ಇಸ್ಲಾಮಿಕ್ ಕಲೋತ್ಸವದಲ್ಲಿ ಭಾಗವಹಿಸಿದ್ದರು.

ಸಬ್ ಜೂನಿಯರ್ ವಿಭಾಗದಲ್ಲಿ ನೆಲ್ಲಿಹುದಿಕೇರಿ ಯೂನಿಟ್, ಜನರಲ್ ಜೂನಿಯರ್ ವಿಭಾಗದಲ್ಲಿ ಸಿದ್ದಾಪುರ, ಜನರಲ್ ಸೀನಿಯರ್ ವಿಭಾಗದಲ್ಲಿ ನೆಲ್ಲಿಹುದಿಕೇರಿ, ಜನರಲ್ ಸೂಪರ್ ಸೀನಿಯರ್ ವಿಭಾಗದಲ್ಲಿ ಸಿದ್ದಾಪುರ ಹಾಗೂ ಜನರಲ್ ಗ್ರೂಪ್ ವಿಭಾಗದಲ್ಲಿ ನೆಲ್ಲಿಹುದಿಕೇರಿ ಯೂನಿಟ್ ಚಾಂಪಿಯನ್ ಪಟ್ಟವನ್ನು ಪಡೆದರು.

ಎಸ್‌ಕೆಎಸ್‌ಎಸ್‌ಎಫ್ ಇಸ್ಲಾಮಿಕ್ ಕಲೋತ್ಸವದ ಸಿದ್ದಾಪುರ ವಲಯದ ಸಬ್ ಜೂನಿಯರ್ ಫೆಸ್ಟ್ ಐಕಾನ್ ಆಗಿ ಶಯಾನ್ ನೆಲ್ಲಿಹುದಿಕೇರಿ, ಜನರಲ್ ಜೂನಿಯರ್ ವಿಭಾಗದಲ್ಲಿ ಮೊಹಮ್ಮದ್ ನಿಹಾಲ್ ಸಿದ್ದಾಪುರ, ಜನರಲ್ ಸೀನಿಯರ್ ವಿಭಾಗದಲ್ಲಿ ಮೊಹಮ್ಮದ್ ಸದಾತ್ ಸಿ.ಎ ಕಂಡಕರೆ, ಜನರಲ್ ಸೂಪರ್ ಸೀನಿಯರ್ ವಿಭಾಗದಲ್ಲಿ ಕೆ.ಎಂ.ಇಸ್ಮಾಯಿಲ್ ಕಂಡಕರೆ ಹಾಗೂ ಇರ್ಫಾನ್ ಸಿದ್ದಾಪುರ ಫೆಸ್ಟ್ ಐಕಾನ್ ಪ್ರಶಸ್ತಿಯನ್ನು ಪಡೆದುಕೊಂಡರು.

ಸಿದ್ದಾಪುರ ವಲಯ ಮಟ್ಟದ ಇಸ್ಲಾಮಿಕ್ ಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಡಿಸೆಂಬರ್ 1ರಂದು ಸಿದ್ದಾಪುರದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಇಸ್ಲಾಮಿಕ್ ಕಲೋತ್ಸವದಲ್ಲಿ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net