ಸಿದ್ದಾಜಿ ಅಪ್ಪ ಅದ್ದೂರಿ ಪಲ್ಲಕ್ಕಿ ಉತ್ಸವ

2708klb05
Published on

ಕಲಬುರಗಿ: ನಗರದ ಶಹಾಬಜಾರದ ಚನ್ನಮಲ್ಲೇಶ್ವರ ನಗರದಲ್ಲಿ ಶ್ರೀ ಸಿದ್ದಾಜಿ ಅಪ್ಪ ಗೌಳಿ ಸಮಾಜದಿಂದ ಸಿದ್ದಾಜಿ ಅಪ್ಪ ಅವರ ಬೃಹತ್ ಅದ್ದೂರಿ ಪಲ್ಲಕ್ಕಿ ಉತ್ಸವ ಸಾವಿರಾರು ಭಕ್ತರ ಮಧ್ಯೆ ಸಡಗರ, ಸಂಭ್ರಮದ ಮಧ್ಯೆ ಮಂಗಳವಾರ ನೆರವೇರಿತು.
ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯೂ ಲಂಗೋಟಿಪೀರ್ ದರ್ಗಾ, ಅಯ್ಯರವಾಡಿ ಚೌಕ್, ಲಾಲ್ ಹನುಮಾನ ದೇವಸ್ಥಾನದ ಮಾರ್ಗವಾಗಿ ಪುನಃ ಸಿದ್ದಾಜಿ ಅಪ್ಪ ದೇವಸ್ಥಾನ ತಲುಪಿತು.
ಗೌಳಿ ಸಮಾಜದ ಸಹಸ್ರಾರು ಭಕ್ತರು ಭಜನೆ, ಜೈಕಾರದೊಂದಿಗೆ ಭಾಗವಹಿಸಿದರು. ಪಲ್ಲಕ್ಕಿ ಉತ್ಸವದಲ್ಲಿ ಡೊಳ್ಳು, ಬಾಜಾ, ಭಜಂತ್ರಿ, ವಾದ್ಯ ಮೇಳ, ಯುವಕರ ಲೇಜಿಮ್ ಮೆರಗು ನೀಡಿತು. ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ ನೆರವೇರಿದವು. ಎಲ್ಲ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ದೇವಸ್ಥಾನ ಅಧ್ಯಕ್ಷ ರಾಣೋಜಿ ದಾಂಡಗೆ, ಪ್ರಧಾನ ಕಾರ್ಯದರ್ಶಿ ರಮೇಶ ಲಾಲಬುಂದರೆ, ಚಂದ್ರಕಾAತ್, ಪ್ರಕಾಶ ರನಸಜೆ, ಧಾನು ಕಟಕಾಳು, ಶಂಕರ ಬಡೋನೆ, ಮಹದೇವ ಲಾಲ್ ಬಂದ್ರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net