

ಚಿಕ್ಕನಾಯಕನಹಳ್ಳಿ: ಸ್ಥಾವರ ಶ್ರೇಷ್ಠವಲ್ಲ ವೀರಶೈವ ಶ್ರೇಷ್ಠ, ಜಾತಿ ಶ್ರೇಷ್ಠವಲ್ಲ ಧರ್ಮಶ್ರೇಷ್ಠ. ಕಟ್ಟಡ ಶಾಶ್ವತವಲ್ಲ ಬದುಕು ಶ್ರೇಷ್ಠ ಎಂಬ ತತ್ವಗಳನ್ನು ನೀಡಿರುವಂತಹ ಸಿದ್ದರಾಮ, ಬಸವಣ್ಣ ಅವರನ್ನು ಮತ್ತಷ್ಟು ಓದಿಕೊಳ್ಳಬೇಕಾದ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ವಾಧುಸ್ವಾಮಿ ಹೇಳಿದರು.
ಗೋಡೆಕೆರೆ ಶ್ರೀ ಸಿದ್ದರಾಮೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ನೊಳಂಬ ಲಿಂಗಾಯತ ಸಂದಿಂದ ಏರ್ಪಡಿಸಿದ್ದ 848ನೇ ಸಿದ್ದರಾಮೇಶ್ವರರ ಜಯಂತ್ಯುತ್ಸವದಲ್ಲಿ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ವಾತನಾಡಿದರು.
ಶ್ರೀಶೈಲದಿಂದ ಸೊಲ್ಲಾಪುರಕ್ಕೆ ಬಂದು ಅಲ್ಲ್ಲಿ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿಯ ಭವ್ಯ ದೇವಾಲಯ ಕಟ್ಟಿಸಿದ ಸಿದ್ದರಾಮೇಶ್ವರರು, ಚಾಮಲಾದೇವಿ ವಾತೆ ಸಹಕಾರದಿಂದ ಕೆರೆ-ಕಟ್ಟೆ, ದೇವಾಲಯಗಳನ್ನು ನಿರ್ಮಿಸಿ ಕಾಯಕತತ್ವ ರೂಢಿಸಿಕೊಂಡರು. ಹಾಗಾಗಿ ಚಾಮಲಾದೇವಿ ಅವರನ್ನು ನೆನಪು ವಾಡಿಕೊಳ್ಳಬೇಕು. ನಂತರ ಅಲ್ಲಮಪ್ರಭು ಪ್ರಭಾವದಿಂದ ಕಾಯಕ ತತ್ವದೊಂದಿಗೆ ಶಿವತತ್ವ ಯೋಗದ ಕಡೆಗೆ ಗಮನಹರಿಸುತ್ತಾರೆ. ಈ ಸಂದರ್ಭದಲ್ಲಿ ಸ್ಥಾವರ ಶ್ರೇಷ್ಠವಲ್ಲ ವೀರಶೈವ ಶ್ರೇಷ್ಠ ಎಂದು ತಿಳಿಯುತ್ತಾರೆ ಎಂದರು.
ಪಿತೂರಿ ಮಾಡುವುದು, ಕಿರುಕುಳ ಕೊಡುವ ಬದಲು ಇತರರಿಗೆ ದಾರಿದೀಪವಾಗಬೇಕು. ಸವಾಜಕ್ಕೆ ನಾಯಕತ್ವವೂ ಬೇಕು, ಗುರುಗಳೂ ಬೇಕಾಗಿದೆ. ಮನುಷ್ಯನಲ್ಲಿ ಛಲವಿರಬೇಕು, ಸಾಧನೆಗೆ ಛಲವೇ ಮುಖ್ಯ ಎಂದು ಹೇಳಿದರು.
ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ವಾತನಾಡಿ, ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಅವರ ಭಕ್ತರಾಗಿದ್ದ ಸಿದ್ದರಾಮೇಶ್ವರರು, ಈ ನಾಡುಕಂಡ ಮಹಾನ್ ಜ್ಞಾನಿಯಾಗಿದ್ದಾರೆ. ಕಾಯಕ ತತ್ವದೊಂದಿಗೆ ರೈತರಿಗಾಗಿ ಸುವಾರು 16 ಸಾವಿರ ಕೆರೆ-ಕಟ್ಟೆಗಳನ್ನು ಕಟ್ಟಿಸಿ, ಅಂತರ್ಜಾತಿ ವಿವಾಹಗಳನ್ನು ವಾಡಿ ಸಮಾಜದಲ್ಲಿದ್ದ ಮೂಢನಂಬಿಕೆಗಳನ್ನು ದೂರ ವಾಡಿದ್ದರು. ಮಹಾನ್ ಪವಾಡ ಪುರುಷರಾಗಿದ್ದ ಸಿದ್ದರಾಮೇಶ್ವರರಿಗೆ ಅಲ್ಲಮಪ್ರಭು, ಬಸವಣ್ಣ, ಚನ್ನಬಸವಣ್ಣ, ದೇವರ ದಾಸಿಮ್ಮಯ್ಯ ಅವರಂತೆ ಸಮಾನ ಸ್ಥಾನವು ಲಿಂಗಾಯಿತ ಪರಂಪರೆಯಲ್ಲಿ ದೊರೆತಿದೆ ಎಂದರು.
ಶಾಸಕರಾದ ಬಿ.ಸಿ.ನಾಗೇಶ್, ಜ್ಯೋತಿಗಣೇಶ್, ಬೇಲೂರಿನ ಶಾಸಕ ಲಿಂಗೇಶ್, ತುಮುಲ್‌ನ ಹಳೇಮನೆ ಶಿವನಂಜಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಆರ್.ಶಶಿಧರ್, ವಾಜಿ ಎಪಿಎಂಸಿ ಅಧ್ಯಕ್ಷ ಅಗಸರಹಳ್ಳಿ ಶಿವರಾಜು, ನೊಳಂಬ ಲಿಂಗಾಯತ ಸಂದ ಉಪಾಧ್ಯಕ್ಷರಾದ ಎಸ್.ಆರ್.ಪಾಟೀಲ್, ಬಿ.ಕೆ.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ರಾಮಲಿಂಗಪ್ಪ, ಖಜಾಂಚಿ ಕೆ.ಬಿ.ರುದ್ರಪ್ಪ, ಜಂಟಿ ಕಾರ್ಯದರ್ಶಿಗಳಾದ ರುದ್ರೇಗೌಡ, ಸಿದ್ದರಾಮೇಗೌಡ (ಸಿರಿ), ನಿರ್ದೇಶಕ ರವಿಶಂಕರ್ ಮತ್ತಿತರರು ಇದ್ದರು.
ಧಾರ್ಮಿಕ ತತ್ವಕ್ಕೆ ಮಹತ್ವ ನೀಡಿದ ಮಹನೀಯರ ವಿಚಾರಗಳನ್ನು ಗ್ರಹಿಸುವ ಮೂಲಕ ಅವರ ತತ್ವಾದರ್ಶಗಳನ್ನು ಪಾಲಿಸಿ ಶಿವಯೋಗಿತತ್ವಗಳನ್ನು ಎಲ್ಲರೂ ಪಾಲಿಸಬೇಕು. 2023ರಲ್ಲಿಯೂ ಇಲ್ಲೇ ಜಯಂತಿ ಆಚರಿಸಬೇಕು. ಸರಳವಾಗಿ ಅರ್ಥಗರ್ಭಿತವಾಗಿ ಜಯಂತಿ ನಡೆದಿದ್ದು, ಎಲ್ಲರೂ ಧಾರ್ಮಿಕ ತತ್ವದಲ್ಲಿ ಉತ್ತಮ ಕೆಲಸಗಳನ್ನು ವಾಡಿ ಉತ್ತಮ ಚಾರಿತ್ರ್ಯ ಬೆಳೆಸಿಕೊಳ್ಳಿ ಎಂದು ಗೋಡೆಕೆರೆಯ ಚರಪಟ್ಟಾಧ್ಯಕ್ಷ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು 1974ರಲ್ಲಿ ಪ್ರಥಮವಾಗಿ ಅರಸೀಕೆರೆಯಲ್ಲಿ ಆಚರಿಸಿದ್ದು, ನಿರಂತರವಾಗಿ ರಾಜ್ಯದ ನಾನಾ ಭಾಗಗಳು, ಹೊರರಾಜ್ಯದಲ್ಲೂ ಜಯಂತಿ ಆಚರಿಸಲಾಗುತ್ತಿದೆ. ಎಸ್.ಎಂ.ನಾಗರಾಜು, ರಾಜ್ಯ ನೊಳಂಬ ಲಿಂಗಾಯತ ಸಂದ ಅಧ್ಯಕ್ಷ, ವಾಜಿ ಶಾಸಕ