ಸಿದ್ದರಾಮಯ್ಯ ನೆರವಿನ ಹಸ್ತ ..!

bkt-10-10
ಬಾಗಲಕೋಟೆ ನಗರದ ಕೆರೂಡಿ ಆಸ್ಪತ್ರೆಯಲ್ಲಿ ಗಾಯಾಳುವಿನ ಎಕ್ಸರೇ ರಿಪೋರ್ಟ ಗಮನಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ.
Published on

ಬಾಗಲಕೋಟೆ:ಸಿದ್ದರಾಮೋತ್ಸವದ ಕಾರ್ಯಕ್ರಮಕ್ಕೆ ದಾವನಗೆರಿಗೆ ತೆರಳುವ ವೇಳೆ ಬಾದಾಮಿ ತಾಲೂಕಿನ ಹೂಲಗೇರಿ ಬಳಿ ಕ್ರೂಷರ್ ಪಲ್ಟಿಯಾಗಿ ಅಪಘಾತವಾಗಿ ಓರ್ವ ಮೃತಪಟ್ಟ ಕುಟುಂಬ ಹಾಗೂ ಗಾಯಾಳುಗಳಿಗೆ ವಿ.ಪಕ್ಷ ನಾಯಕ ಸಿದ್ದರಾಮಯ್ಯ ಬುಧವಾರ ಒಟ್ಟು 7 ಲಕ್ಷ ರೂ.ನೆರವಿನ ಹಸ್ತ ಚಾಚಿದ್ದಾರೆ.
ಬುಧವಾರ ಬಾಗಲಕೋಟೆ ನಗರ ಹಾಗೂ ಬೀಳಗಿ ತಾಲೂಕಿನ ಆಲಗುಂಡಿ ಗ್ರಾಮಕ್ಕೆ ಭೇಟಿ ನೀಡಿ ಗಾಯಾಳುಗಳು ಹಾಗೂ ಮೃತ ಕುಟುಂಬಕ್ಕೆ ವೈಯಕ್ತಿಕವಾಗಿ ಹಣಕಾಸು ನೆರವು ನೀಡಿದರು. ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ನಾಲ್ವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಐಸಿಯುನಲ್ಲಿ ಇರುವ ಇಬ್ಬರು ಗಾಯಾಳುಗಳಿಗೆ ತಲಾ ಒಂದು ಲಕ್ಷ ರೂ., ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುವ ಇಬ್ಬರಿಗೆ ತಲಾ 50 ಸಾವಿರ ರೂ. ನೀಡಿದರು.

ನಂತರ ಬೀಳಗಿ ತಾಲೂಕಿನ ಆಲಗುಂಡಿ ಗ್ರಾಮಕ್ಕೆ ಭೇಟಿ ನೀಡಿ ಅಪಘಾತದಲ್ಲಿ ಮೃತಪಟ್ಟ ಪ್ರಕಾಶ ಬಡಿಗೇರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಬಡಿಗೇರ ಕುಟುಂಬಕ್ಕೆ ಎರಡು ಲಕ್ಷ ರೂ. ಹಣ ನೀಡಿದರು. ಪ್ರಕಾಶ ಪತ್ನಿಗೆ ಮಾಶಾಸನ ಹಾಗೂ ಅವರ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವುದಾಗ ಭರವಸೆ ನೀಡಿದರು. ಅಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿರುವ ಇದೇ ಗ್ರಾಮದ 8 ಜನರಿಗೆ ತಲಾ 25 ಸಾವಿರ ರೂ. ಸಹಾಯ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net