

ವಿಜಯಪುರ:ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ಡಾ.ಎಂ.ಬಿ.ಪಾಟೀಲರು ಬಿಜೆಪಿ ಸೇರ್ಪಡೆಯಾಗುತ್ತಾರೆಂದು ವ್ಯಂಗ್ಯವಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಓರ್ವ ಜೋಕರ್ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಹಾಗೂ ಎಂ.ಬಿ. ಪಾಟೀಲ ಕಾಂಗ್ರೆಸ್‌ನ ನಿಷ್ಠಾವಂತ ಹಿರಿಯ ನಾಯಕರು. ಅಂಥ ನಾಯಕರು ಬಿಜೆಪಿ ಸೇರುತ್ತಾರೆಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷರ ಮಿದುಳಿಗೂ ಮತ್ತು ಬಾಯಿಗೂ ಸಂಪರ್ಕ ಇಲ್ಲ ಎಂದು ಟೀಕಿಸಿದ್ದಾರೆ.
ಇಂತ ಮೂರ್ಖರು ಎಲ್ಲಿಯವರೆಗೆ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಇರುತ್ತಾರೋ ಅಲ್ಲಿಯವರೆಗೆ ಬಿಜೆಪಿಗೆ ಉಳಿಗಾಲವಿಲ್ಲ. ಇಂಥವರನ್ನು ಬಿಜೆಪಿ ಎಷ್ಟು ಬೇಗ ಹೊರಹಾಕುತ್ತದೋ ಅಷ್ಟು ಬೇಗ ಒಳ್ಳೆಯದು ಎಂದ ಅವರು, 2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಇಂಥವರ ಅಂಗಡಿ ಬಂದ್ ಆಗುತ್ತದೆ ಎಂದು ರಾಜು ಆಲಗೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.