ಸಿದ್ದಯ್ಯನಪುರದಲ್ಲಿ ಕಂಡಾಯಗಳ ಉತ್ಸವ

30kglphoto-1..,.,,
Published on

ಕೊಳ್ಳೇಗಾಲ: ಆಷಾಢ ಮಾಸದ ಎರಡನೇ ಶುಕ್ರವಾರದ ಹಿನ್ನೆಲೆಯಲ್ಲಿ ತಾಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ ಶುಕ್ರವಾರ ಶ್ರೀ ಸಿದ್ದಪ್ಪಾಜಿ ಕಂಡಾಯಗಳ ಉತ್ಸವ ಶ್ರದ್ಧಾ-ಭಕ್ತಿಯಿಂದ ಜರುಗಿತು.


ಗ್ರಾಮದ ಶ್ರೀ ಬ್ರಹ್ಮೇಶ್ವರ ದೇವಾಲಯದಲ್ಲಿ ಶ್ರೀ ಕ್ಷೇತ್ರ ಕುರುಬನಕಟ್ಟೆ ಕಂಡಾಯಗಳಿಗೆ ಹೂ-ಹೊಂಬಾಳೆ ಧರಿಸಿ ಪೂಜೆ ಸಲ್ಲಿಸಿದ ಬಳಿಕ ಮಂಗಳವಾದ್ಯದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮದ ಯುವಕರು ಮೆರವಣಿಗೆಯಲ್ಲಿ ಮಂಗಳವಾದ್ಯ ಶಬ್ದಕ್ಕೆ ಕುಣಿದು ಕುಪ್ಪಳಿಸಿದರು.
ಮೆರವಣಿಗೆ ಮೂಲಕ ಕಂಡಾಯ ಪ್ರತಿ ಮನೆಯ ಮುಂಭಾಗ ಬರುವಾಗ ಮಹಿಳೆಯರು ಹಣ್ಣು-ಕಾಯಿ ಪೂಜೆ ಸಲ್ಲಿಸಿದರು. ಕಂಡಾಯ ಉತ್ಸವದ ಹಿನ್ನೆಲೆಯಲ್ಲಿ ಗ್ರಾಮವು ದೀಪಾಲಂಕಾರದಿಂದ ಕಂಗೊಳಿಸಿತು.


ಗ್ರಾ.ಪಂ. ಅಧ್ಯಕ್ಷ ಗುಣಶೇಖರ್, ಸದಸ್ಯರಾದ ಮುರುಳೀಧರ್, ಜಯಮ್ಮ, ಶಶಿಕುಮಾರಿ, ಗ್ರಾಮದ ಯಜಮಾನರಾದ ಚಾಮರಾಜು, ಲಕ್ಷ್ಮಣಮೂರ್ತಿ, ಕಾಂತರಾಜು, ಲಿಂಗರಾಜು, ಮಹದೇವ, ಮಾದಯ್ಯ, ಸಿ.ಎಂ.ಮಹದೇವ, ಮಹೇಂದ್ರ, ನಂಜುಂಡಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net