ಸಿದ್ದನಗೌಡ ಪಾಟೀಲ ಸದಾ ಸ್ಮರಣೀಯ

Nesargi
ಗಾಳೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯನ್ನು ಚಿದಾನಂದ ಸ್ವಾಮೀಜಿ ಉದ್ಘಾಟಿಸಿದರು. ಮಹಾಂತೇಶ ಕೌಜಲಗಿ, ಸಿದ್ದನಗೌಡ ಪಾಟೀಲ, ಬಿ.ಎಫ್.ಕೊಳದೂರ ಇತರರಿದ್ದರು.
Published on

ನೇಸರಗಿ: ಗಡಿ ಜಿಲ್ಲೆಯಲ್ಲಿ ಕನ್ನಡವನ್ನು ಗಟ್ಟಿಗೊಳಿಸಿದ ಮಹಾನ್ ಚೇತನ, ಜಿಲ್ಲೆಯ ಪ್ರಥಮ ಕನ್ನಡ ಮೇಯರ್ ದಿ. ಡಾ.ಸಿದ್ದನಗೌಡ ಪಾಟೀಲ ಅವರ ವ್ಯಕ್ತಿತ್ವ ಸ್ಮರಣೀಯವಾದದ್ದು ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದ್ದಾರೆ.

ಸಮೀಪದ ಗಾಳೇಶ್ವರ ಮಠದ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ದಿ.ಡಾ.ಸಿದ್ದನಗೌಡ ಪಾಟೀಲರ ಪ್ರಥಮ ವರ್ಷದ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾತನಾಡಿದರು. ಬೆಳಗಾವಿ ಗಡಿ ಜಿಲ್ಲೆಯಲ್ಲಿ ಕನ್ನಡ ಗಟ್ಟಿಗೊಳಿಸಿದ ಕೀರ್ತಿ ಪಾಟೀಲರಿಗೆ ಸಲ್ಲುತ್ತದೆ. ನಾಡು-ನುಡಿಗಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಅಲ್ಲದೆ, ಮಲ್ಲಾಪುರ ವಾಲ್ಮೀಕಿ ಸಮಾಜದ ಜನರನ್ನು ಕಂಡರೆ ಅಪಾರ ಪ್ರೀತಿ ತೋರುತ್ತಿದ್ದರು. ವಾಲ್ಮೀಕಿ ಸಮುದಾಯದ ಪ್ರತಿಯೊಬ್ಬರ ಮನದಲ್ಲಿ ನೆಲೆಯೂರಿದ್ದಾರೆ ಎಂದರು. ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಸಿದ್ದನಗೌಡ ಪಾಟೀಲ ಅವರು ಬೆಳಗಾವಿ ಗಡಿ ಜಿಲ್ಲೆಗೆ ಮೇಯರ್ ಆದ ಸಂದರ್ಭದಲ್ಲಿ ನೀಡಿದ ಕೊಡುಗೆ ಅಪಾರವಾದುದು ಎಂದರು. ಯಲ್ಲನಗೌಡ ಪಾಟೀಲ, ಮಹಾಂತೇಶ ಸಿದ್ದನಗೌಡ ಪಾಟೀಲ, ಜಿಲ್ಲಾ ಗ್ರಾಮೀಣ ಬಿಜೆಪಿ ಉಪಾಧ್ಯಕ್ಷ ಬಿ.ಎ್.ಕೊಳದೂರ, ರಾಜಶೇಖರ ಎತ್ತಿನಮನಿ, ಶಿವನಗೌಡ
ಪಾಟೀಲ, ಸಚಿನ ಪಾಟೀಲ, ಡಿ.ಎಂ.ಪಾಟೀಲ, ಅಶೋಕ ಚಂದರಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net