

ಅರಕಲಗೂಡು: ತಾಲೂಕಿನ ಹಲವೆಡೆ ಸೋಮವಾರ ಗುಡುಗು ಸಹಿತ ಸಾಧಾರಣ ಮಳೆ ಸುರಿದಿದೆ. ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣವಿದ್ದು ಕೆಲವೆಡೆ ಗುಡುಗು ಸಹಿತ ಮಳೆ ಸುರಿದು ಭೂಮಿಯನ್ನು ತಂಪಾಗಿಸಿತು. ತಾಲೂಕಿನ ಪಾರಸನಹಳ್ಳಿ ಗ್ರಾಮದ ಚನ್ನಯ್ಯ ಎಂಬುವರ ಮಗ ಕೇಶವ ಅವರ ವಾಸದ ಮನೆಗೆ ಸಿಡಿಲು ಬಡಿದು ಮನೆ ಹಾಗೂ ಟಿವಿ ದೂರದರ್ಶನದ ಕೇಬಲ್ ಎಲೆಕ್ಟ್ರಿಕಲ್ ವಸ್ತುಗಳು ಹಾನಿಗೀಡಾಗಿವೆ.