ಸಿಡಿಲು ಬಡಿದು ಬಾಲಕ ಸಾವು

Screenshot-2022-11-15-120621-
Published on

ಬಂಟ್ವಾಳ: ಸಿಡಿಲಿನ ಆಘಾತಕ್ಕೆ ಬಾಲಕನೋರ್ವ ಬಲಿಯಾದ ಘಟನೆ ಬಂಟ್ವಾಳ ಕರಿಯಂಗಳ ಗ್ರಾಮದಲ್ಲಿ ನಡೆದಿದೆ.

ಸಾಣೂರುಪದವು ನಿವಾಸಿ ಕಾರ್ತಿಕ್(16) ಮೃತ ಬಾಲಕ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೋಮವಾರ ರಾತ್ರಿ ಭಾರಿ ಮಳೆ ಸುರಿದಿದ್ದು ಮನೆಯಲ್ಲಿ ಎಲ್ಲರೂ 9ರ ಸುಮಾರಿಗೆ ಊಟ ಮುಗಿಸಿ ಮಲಗಿದ್ದರು. ಈ ವೇಳೆ ಸಿಡಿಲು ಸಹಿತ ಮಳೆ ಬಂದು, ಮಲಗಿದ್ದವರಿಗೆ ಕರೆಂಟ್ ಶಾಕ್ ಹೊಡೆದ ಅನುಭವವಾಗಿದೆ.

ಈ ವೇಳೆ ಮನೆಮಂದಿ ಹಾಲ್ಗೆ ಓಡಿ ಬಂದಿದ್ದಾರೆ. ಅದರೆ ಬಾಲಕ ಕಾರ್ತಿಕ್ ಏಳದೆ ಇದ್ದಾಗ, ಆತನನ್ನು ತಕ್ಷಣವೇ ಕೈಕಂಬದ ಕ್ಲಿನಿಕ್‌ಗೆ ಕರೆತರಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದಾಗ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net