ಸಿಡಿಲು ಬಡಿದು ದಾಸೋಹ ಭವನಕ್ಕೆ ಹಾನಿ

26-NLG-1 A
Published on

ನವಲಗುಂದ: ಪಟ್ಟಣದ ಗವಿಮಠಕ್ಕೆ ಹೊಂದಿಕೊಂಡಿರುವ ದಾಸೋಹ ಭವನದ ಛಾವಣಿಯ ಕುಂಬಿಗೆ ಸೋಮವಾರ ಮಧ್ಯರಾತ್ರಿ ಭಾರಿ ಪ್ರಮಾಣದಲ್ಲಿ ಸಿಡಿಲು ಬಡಿದಿದೆ. ದಾಸೋಹಮಠದ ಒಳಗಿನ ಭಾಗ ಮತ್ತು ಅಕ್ಕಪಕ್ಕದ ಕಟ್ಟಡಗಳು, ವಿದ್ಯುತ್ ತಂತಿ, ಮೀಟರ್, ಸಿ.ಸಿ. ಕ್ಯಾಮರಾ, ಕಂಪ್ಯೂಟರ್​ಗಳು ಹಾಗೂ ಇತರ ಸಲಕರಣೆಗಳು ಹಾನಿಗೊಳಗಾಗಿವೆ. ಭಾರಿ ಶಬ್ದವಾಗಿದ್ದರಿಂದ ಅಕ್ಕಪಕ್ಕದ ಮನೆಯವರು ಭೂಕಂಪವೇನಾದರು ಆಯಿತೇನೊ ಎಂದು ಮನೆಯಿಂದ ಹೊರಗೆ ಬಂದಿದ್ದರು. ಬಳಿಕ ಗವಿಮಠದ ಛಾವಣಿಗೆ ಸಿಡಿಲು ಬಡಿದಿದೆ ಎಂದು ತಿಳಿದು ಮನೆಗಳಿಗೆ ತೆರಳಿದರು. ಮಂಗಳವಾರ ಬೆಳಗ್ಗೆ ಗವಿಮಠದ ಬಸವಲಿಂಗ ಸ್ವಾಮೀಜಿ, ಅಣ್ಣಪ್ಪ ಬಾಗಿ ಹಾಗೂ ಗವಿಮಠದ ಆಡಳಿತ ಮಂಡಳಿ ಸದಸ್ಯರು ಸ್ಥಳ ಪರಿಶೀಲಿಸಿ ವಸ್ತುಸ್ಥಿತಿಯ ಬಗ್ಗೆ ತಾಲೂಕಾಡಳಿತ್ಕೆ ತಿಳಿಸಿದರು. ಹಾನಿಗೀಡಾದ ವರದಿ ಆಧರಿಸಿ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಪಿಎಸ್​ಐ ಜಯಪಾಲ ಪಾಟೀಲ ಸ್ಥಳ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net