

ಖಾನಾಪುರ: ತಾಲೂಕಿನ ಚಪ್ಗಾಂವ್ ಗ್ರಾಮದಲ್ಲಿ ಸಿಡಿಲು ಬಡಿದು 11 ಮೇಕೆಗಳು ಮೃತಪಟ್ಟ ಟನೆ ಸೋಮವಾರ ನಡೆದಿದೆ. ಬೈಲಹೊಂಗಲ ತಾಲೂಕಿನ ವನ್ನೂರ ಮೂಲದ ಕುರಿಗಾಹಿ ಉಮೇಶ ಚಿಚ್ಚಡಿ ಅವರಿಗೆ ಸೇರಿದ ಮೇಕೆಗಳಾಗಿವೆ.
ಇನ್ನೂ ಗ್ರಾಪಂ ಮಾಜಿ ಉಪಾಧ್ಯ ಮಾರುತಿ ಚೋಪ್ಡೆ ಎಂಬುವರ ಮನೆಗೆ ಸಿಡಿಲು ಬಡಿದು ್ಯಾನ್ ಮತ್ತು ವಿದ್ಯುತ್ ದೀಪಗಳು ಸುಟ್ಟುಹೋಗಿವೆ ಎಂದು ನಂದಗಡ ಠಾಣೆ ಪೊಲೀಸರು ತಿಳಿಸಿದ್ದಾರೆ. ಖಾನಾಪುರ&ಯಲ್ಲಾಪುರ ಹೆದ್ದಾರಿಯ ಕರಂಬಳ್ ಗ್ರಾಮದ ಬಳಿ ಮಾವಿನ ಮರವೊಂದು ಉರುಳಿ ಬಿದ್ದ ಪರಿಣಾಮ ರಾಜ್ಯ ಹೆದ್ದಾರಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ತಾಲೂಕಿನ ನಂದಗಡ, ಬೀಡಿ, ಚಾಪ್ಗಾಂವ್ ಮತ್ತು ಇತರ ಪ್ರದೇಶಗಳಲ್ಲೂ ಭಾರೀ ಮಳೆಯಾಗಿದೆ.