

ಚಿಕ್ಕಮಗಳೂರು: ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಮುಂದಿನ ಅವಧಿಗೆ ದಲಿತ ಸಮುದಾಯ ಮುಖಂಡರನ್ನು ಆಯ್ಕೆಗೊಳಿಸಬೇಕು ಎಂದು ಡಿಎಸ್‌ಎಸ್ ಮುಖಂಡರು ಮಂಗಳವಾರ ಉಪವಿಭಾಗಾಧಿಕಾರಿ ಸುದರ್ಶನ್ ಮೂಲಕ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್‌ಕುಮಾರ್, ಮಹಿಳಾ ಸಂಚಾಲಕಿ ಕೆ.ಬಿ.ಗೀತಾ, ತಾಲೂಕು ಸಂಘಟನಾ ಸಂಚಾಲಕ ಡಿ.ಎಸ್.ಉಮೇಶ್ ಉಪಸ್ಥಿತರಿದ್ದರು.