ಸಿಜೆಐ ಮೇಲೆ ಶೂ ಎಸೆತ ಯತ್ನಕ್ಕೆ ಖಂಡನೆ

H.A.VENKATESH
Published on

ಮೈಸೂರು: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ನಡೆದಿರುವ ಯತ್ನ ದೇಶವೇ ತಲೆ ತಗ್ಗಿಸುವಂತಹ ವಿಚಾರ. ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಡೆದಿರುವ ಈ ದಾಳಿ ವಿದ್ವಂಸಕ ಮನಸ್ಥಿತಿಯ ಸಂಕೇತ. ಸನಾತನ ಧರ್ಮದ ನೆಪದಲ್ಲಿ ನಡೆಯುತ್ತಿರುವ ದುರ್ವರ್ತನೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಕಿಡಿಕಾರಿದ್ದಾರೆ.

ದೇವರು ಮತ್ತು ಧರ್ಮದ ನೆಪದಲ್ಲಿ ಅಶಾಂತಿ ಸೃಷ್ಟಿಸುವುದೇ ತಮ್ಮ ಕೆಲಸ ಎಂದು ಭಾವಿಸಿರುವ ಈ ಸಮಾಜಘಾತುಕರಿಗೆ ರಾಜಕೀಯ ಮತ್ತು ಆಡಳಿತಾತ್ಮಕ ಬೆಂಬಲ ಸಿಗುತ್ತಿದೆ. ಇದು ಪ್ರಜಾತಂತ್ರ ವ್ಯವಸ್ಥೆಯ ದುರಂತ. ಸಿಜೆಐ ಮೇಲೆ ನಡೆದಿರುವ ಈ ದಾಳಿಯನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಬೇಕು.

ದುರ್ವರ್ತನೆ ತೋರಿರುವ ವಕೀಲ ಕಿಶೋರ್‌ನನ್ನು ಜೀವನ ಪರ್ಯಂತ ವಕೀಲಿಕೆ ನಡೆಸದಂತೆ ನಿರ್ಬಂಧಿಸಿ ಈತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಅಸಹನೆ, ಧಾರ್ಮಿಕ ತಾರತಮ್ಯ, ದೌರ್ಜನ್ಯ ಇತ್ಯಾದಿ ಅಂಶಗಳ ಬಗ್ಗೆ ಸಿಜೆಐ ಇನ್ನಾದರೂ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ವಿಚಾರಣೆ ಆರಂಭಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net