ಸಿಗ್ನಲ್ ಅಳವಡಿಸಲು ಮನವಿ

trafficsignal
Published on

ಚಿತ್ರದುರ್ಗ: ಪಾದಚರಿಗಳು, ಮಕ್ಕಳ ಹಿತದೃಷ್ಟಿಯಿಂದ ನಗರದ ಪ್ರವಾಸಿ ಮಂದಿರ ಮುಂಭಾಗದ ವೃತ್ತದಲ್ಲಿ ಸಿಗ್ನಲ್ ಅಳವಡಿಸಿ, ಸಂಚಾರಿ ಪೊಲೀಸರನ್ನು ನಿಯೋಜಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಅಪಘಾತ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಶಿಕ್ಷಕರು ಮತ್ತು ಪದವೀಧರರ ಕಾಂಗ್ರೆಸ್ ವಿಭಾಗದ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಬುಧವಾರ ಮನವಿ ಸಲ್ಲಿಸಿದರು. ವಿಭಾಗದ ಅಧ್ಯಕ್ಷ ಮುದಾಸೀರ್ ನವಾಜ್, ಇನ್‌ಟೆಕ್ ನಗರಾಧ್ಯಕ್ಷ ಜಮೀರ್, ಮುನಿರಾಜ್, ಕೋಟಿ, ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net