ಸಿಗದ ಸಮರ್ಪಕ ಚಿಕಿತ್ಸೆ, ರೋಗಿ ಸಾವು

klb3
ಕಮಲಾಪುರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಹಸೀಲ್ದಾರ್ ಮಹಮ್ಮದ್ ಮೋಹಸಿನ್ ಭೇಟಿ ನೀಡಿ ಸಮಸ್ಯೆ ಆಲಿಸಿದರು. ವಿಕಾಸ ಕಣಜಿ, ಶಿವಶಂಕರ ಸುಬೇದಾರ, ಡಾ.ಜಾಹೇದ್, ಶ್ರೀಕಾಂತ ಕಾಲಮಂದರ್ಗಿ ಇದ್ದರು.
Published on

ಕಮಲಾಪುರ: ಸಮರ್ಪಕ ಚಿಕಿತ್ಸೆ ಸಿಗದೆ ರೋಗಿಯೊಬ್ಬ ಮೃತಪಟ್ಟ ಘಟನೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಬೆಳಗ್ಗೆ ನಡೆದಿದ್ದು, ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸಂಬAಧಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಗೊಬ್ಬೂರವಾಡಿ ಗ್ರಾಮದ ನಿವಾಸಿ ಸಂತೋಷ ಮನೋಹರ (32) ಹಠಾತ್ ಕುಸಿದು ಬಿದ್ದು, ಪ್ರಜ್ಞಾಹೀನ ಸ್ಥಿತಿ ತಲುಪಿದ್ದ. ಕೂಡಲೇ ಸ್ಥಳದಲ್ಲಿದ್ದವರು 108 ಆಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಬಳಿಕ ಕಮಲಾಪುರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರಲಾಗಿದೆ. ಈ ವೇಳೆ ಆಯುಷ್ ವೈದ್ಯ ಮಾತ್ರ ಕರ್ತವ್ಯದಲ್ಲಿ ಇದ್ದು, ಚಿಕಿತ್ಸೆ ಬೇಕಾದ ಯಂತ್ರೋಪಕರಣಗಳು ಲಭ್ಯವಿರಲಿಲ್ಲ.

ಇದರಿಂದಾಗಿ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗದಿರುವುದರಿಂದ ಸಂತೋಷ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸಂಬAಧಿಕರು ಹಾಗೂ ಕುಟುಂಬಸ್ಥರು ರೊಚ್ಚಿಗೆದ್ದು, ಆಸ್ಪತ್ರೆ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ತಾಲೂಕು ಆಸ್ಪತ್ರೆ ಇದಾಗಿದ್ದು, ಸರಿಯಾದ ಚಿಕಿತ್ಸೆ ಸಿಗಲ್ಲ ಅಂದ್ರೆ ಹೇಗೆ ? ಬಡವರು ಎಲ್ಲಿಗೆ ಹೋಗಬೇಕು ? ಟ್ರಿಟ್‌ಮೆಂಟ್ ಕೊಡಲು ಆಗದಿದ್ದರೆ ಹಾಸ್ಪಿಟಲ್ ಬಂದ್ ಮಾಡಿ ಎಂದು ಕಿಡಿಕಾರಿದರು.

ವಿಷಯ ತಿಳಿಯುತ್ತಿದ್ದಂತೆ ತಹಸೀಲ್ದಾರ್ ಮಹಮ್ಮದ್ ಮೋಹಸಿನ್ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿದರು. ಬಳಿಕ ಕುಟುಂಬದವರಿಗೆ ಸಾಂತ್ವನ ಹೇಳಿ ವೈಯಕ್ತಿಕ ಧನಸಹಾಯ ಮಾಡಿ, ಶವಪರೀಕ್ಷೆ ವರದಿ ಪರಿಗಣಿಸಿ ಸರ್ಕಾರದಿಂದ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಕಿಣ್ಣಿಸಡಕ್ ಗ್ರಾಪಂ ಅಧ್ಯP್ಷÀ ವಿಕಾಸ ಕಣಜಿ, ಅಪರಾಧ ವಿಭಾಗದ ಪಿಎಸ್‌ಐ ಶಿವಶಂಕರ್ ಸುಬೇದಾರ್, ಡೋಂಗರಗಾAವ್ ಆರೋಗ್ಯ ಕೇಂದ್ರದ ವೈದ್ಯ ಡಾ.ಜಾಹೇದ್, ಶ್ರೀಕಾಂತ ಕಾಲಮಂದರ್ಗಿ, ರಾಜಕುಮಾರ ಪಂಚಾಳ, ರಘುನಂದನ್ ದ್ಯಾಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net